ನವಲಗುಂದ: ತಹಶೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕಾಗಿ ತಹಶೀಲ್ದಾರ್ ಅನಿಲ ಬಡಿಗೇರ್ ಹಾಗೂ ಅಧಿಕಾರಿಗಳ ತಂಡ ನವಲಗುಂದ ತಾಲ್ಲೂಕಿನ ಹಾಲಕುಸುಗಲ್ ಗ್ರಾಮಕ್ಕೆ ಶನಿವಾರ ತೆರಳಿತ್ತು. ಈ ವೇಳೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ರು.
ಹೌದು, ಮೊದಲೇ ಮಳೆಯಿಂದ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಅಧಿಕಾರಿಗಳು ಗ್ರಾಮಕ್ಕೆ ಬರೋದೆ ತಡ ಅವರನ್ನು ತಡೆದು ಊರಿನ ನೈಜ್ಯತೆಯನ್ನು ಒಮ್ಮೆ ನೋಡಿ ಎಂದು ಪಟ್ಟು ಹಿಡಿದರು. ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಬೇಕು, ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬೇಕು, ಶಾಲಾ ಮೈದಾನದ ಅವ್ಯವಸ್ಥೆ, ಶಿಥಿಲಗೊಂಡ ಅಂಗನವಾಡಿ, ಮಳೆಗೆ ಬಿದ್ದ ಮನೆಗಳಿಗೆ ಪರಿಹಾರ, ಗ್ರಾಮದಲ್ಲಿ ಸ್ಮಶಾನದ ಜಾಗ ಸೇರಿದಂತೆ ಹಲವು ಬೇಡಿಕೆ ಹಾಗೂ ಕೊರತೆಗಳ ಬಗ್ಗೆ ಚರ್ಚಿಸಲಾಯಿತು.
ಇನ್ನು ಶಾಲಾ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿದ್ದ ಬಿಡಿ, ಗುಟುಕಾ ಹಾಗೂ ತಂಬಾಕು ಅಂಗಡಿಯಲ್ಲಿದ್ದ ತಂಬಾಕು ಉತ್ಪನ್ನಗಳನ್ನು ತಹಶೀಲ್ದಾರ್ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಯಿತು. ಶಾಲಾ ಕಂಪೌಂಡ್ ಕಟ್ಟಡವನ್ನು ಖಾಸಗಿ ಗುತ್ತಿಗೆದಾರ ಒಡೆದುಕೊಂಡಿದ್ದು ಸಾರ್ವಜನಿಕರ ಆಕ್ಷೇಪಣೆ ಹಿನ್ನೆಲೆಯಲ್ಲಿ ತಹಶೀಲ್ದಾರ ಅನಿಲ್ ಬಡಿಗೇರ ಹಾಗೂ ಕ್ಷೇತ್ರದ ಶಿಕ್ಷಣಾಧಿಕಾರಿ ಬಿ. ಎಸ್. ಮಾಯಾಚಾರ ಸ್ಥಳಕ್ಕೆ ಭೇಟಿ ನೀಡಿ ಖಾಸಗಿ ಗುತ್ತಿಗೆದಾರನಿಗೆ ನೋಟೀಸ್ ನೀಡಿ ತಕ್ಷಣವೇ ತಮ್ಮೆಲ್ಲ ಸಾಮಗ್ರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಒಡೆದ ಕಂಪೌಂಡ್ ಗೋಡೆಯನ್ನು ಸುಸಜ್ಜಿತವಾಗಿ ಕಟ್ಟಿಕೊಡುವಂತೆ ನೋಟೀಸ್ ನೀಡಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿಲ್ ಬಡಿಗೇರ್, ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರ, ಗ್ರಾಮ ಪಂಚಾಯತ್ ಅಧ್ಯಕ್ಷ ಮೌಲಾಸಾಬ್ ಖುದ್ದಣ್ಣವರ, ಕೃಷಿ ಅಧಿಕಾರಿ ಶ್ರೀನಾಥ್ ಚಿಮ್ಮಲಗಿ, ತಾಲೂಕು ಆಡಳಿತ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
17/07/2022 10:25 pm