ಕುಂದಗೋಳ : ಕೋವಿಡ್ ಹಾವಳಿ ನಂತರ ಅಭಿವೃದ್ಧಿ ಕೆಲಸಗಳು ವೇಗ ಪಡೆದಿವೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದಲ್ಲಿ ಕಡಲೆ ಖರೀದಿ ಕೇಂದ್ರ, ಇಂಗಳಗಿ ಗ್ರಾಮದಲ್ಲಿ ಎಸ್.ಸಿ.ಪಿ.ಟಿ.ಎಸ್.ಪಿ. ಯೋಜನೆಯ 9 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ, ಹೊಸಳ್ಳಿ ಗ್ರಾಮದಲ್ಲಿ 42.49 ಲಕ್ಷ ವೆಚ್ಚದ ಜಲ ಜೀವನ್ ಮಷಿನ್ ಕಾಮಗಾರಿ ಸೇರಿದಂತೆ ಚಾಕಲಬ್ಬಿ ಗ್ರಾಮದಲ್ಲಿ ಗುಡಗೇರಿ ನವಲಗುಂದ 38 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಎಸ್.ಸಿ.ಕಾಲೋನಿಯಲ್ಲಿ 8.50 ಲಕ್ಷ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಕ್ಷೇತ್ರದ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಸರ್ವ ಗ್ರಾಮ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಸರ್ವ ಸದಸ್ಯರು, ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಸೇರಿದಂತೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
Kshetra Samachara
14/03/2022 04:20 pm