ಹುಬ್ಬಳ್ಳಿ: ಕಾನೂನು ವಿಶ್ವ ವಿದ್ಯಾಲಯದಲ್ಲಿಯೇ ಕಾನೂನು ಪಾಲನೆಯಾಗ್ತಿಲ್ವಾ ಅನ್ನೋ ಅನುಮಾನ ಶುರುವಾಗಿದೆ. ಪರೀಕ್ಷೆಗೆ ಹಾಜರಾಗಬೇಕೋ ಬೇಡವೋ ಎನ್ನೋ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಶುರುವಾಗಿದ್ದು, ಕಾನೂನು ವಿವಿಯ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ನಮ್ಮ ಮುಂದಿನ ಭವಿಷ್ಯದ ಗತಿ ಏನು ಅನ್ನೋ ಪ್ರಶ್ನೆಯನ್ನು ವಿಸಿ ಎದುರು ಇಟ್ಟಿದ್ದಾರೆ..
ಹೌದು..ಬೇಕೇ ಬೇಕು ನ್ಯಾಯ ಬೇಕು ಅಂತಾ ಘೋಷಣೆ ಕೂಗುತ್ತಾ ಇರುವ ವಿದ್ಯಾರ್ಥಿಗಳು. ನಮ್ಮ ಕೂಗು ಕೇಳಿ ನಿಮ್ಮ ತಪ್ಪು ತಿದ್ದಿಕೊಳ್ಳಿ ಅಂತಿರೋ ವಿದ್ಯಾರ್ಥಿನಿಯರು. ಕೂಡಲೇ ಆಫ್ ಲೈನ್ ಪರೀಕ್ಷೆ ರದ್ದು, ಮಾಡಿ ಶೈಕ್ಷಣಿಕ ವರ್ಷದ ತರಗತಿ ಶುರು ಮಾಡಿ ಅಂತಿರುವ ಕಾನೂನು ಪದವೀಧರರು. ರಾಜ್ಯ ಕಾನೂನು ವಿವಿಯ ಧೋರಣೆಯಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಯಾಕೆಂದರೆ ಕಾನೂನು ಪದವಿ ಮೂರು ವರ್ಷ ಇಲ್ಲವೇ ಐದು ವರ್ಷದಲ್ಲಿ ಮುಗಿಸಬೇಕಾದ ವಿದ್ಯಾರ್ಥಿಗಳು ಇದೀಗ ವಿವಿಯ ಧೋರಣೆಯಿಂದ ಒಂದು ವರ್ಷ ಹೆಚ್ಚಿನ ಅವಧಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೋವಿಡ್ ವೇಳೆ ಸ್ಥಗಿತಗೊಂಡ ತರಗತಿಗಳು, ಪರೀಕ್ಷೆಗಳನ್ನು ಸರಿಯಾದ ಸಮಯಕ್ಕೆ ಮುಗಿಸದೇ ಇರುವುದರಿಂದ ವಿದ್ಯಾರ್ಥಿಗಳು ಇದೀಗ ಒಂದು ವರ್ಷದ ಹೆಚ್ಚಿನ ಸಮಯ ಕಾಲಹರಣವಾಗುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
Kshetra Samachara
08/12/2021 09:21 pm