ಧಾರವಾಡ: ಮಹಾದಾಯಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ನಿಲುವು ರಾಜ್ಯಕ್ಕೆ ಮಾರಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಆರೋಪಿಸಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನವರು ನಮ್ಮಂತೆಯೇ ಮಾತನಾಡುತ್ತಾರೆ.
ಗೋವಾದಲ್ಲಿ ಗೋವಾ ಪರವಾಗಿ ಮಾತನಾಡುತ್ತಾರೆ.ದಿನೇಶ ಗುಂಡೂರಾವ್ ಗೋವಾದವರಿಗೆ ಹನಿ ನೀರು ಬಿಡದಂತೆ ಹೋರಾಟ ಮಾಡಲು ಹೇಳುತ್ತಾರೆ ಎರಡು ರಾಷ್ಟ್ರೀಯ ಪಕ್ಷಗಳು ಈ ವಿಚಾರವಾಗಿ ಒಂದಾಗಿ ಕೆಲಸ ಮಾಡಬೇಕು ಅಂದಾಗ ಮಾತ್ರ ವಿವಾದ ಬಗೆ ಹರಿಯುತ್ತದೆ ಎಂದರು.
ಇಲ್ಲಿ ಕಾಂಗ್ರೆಸ್ ನವರು ನಾಟಕ ಮಾಡುತ್ತಿದದ್ದರೆ, ಗೋವಾದಲ್ಲಿ ಕಾಂಗ್ರೆಸ್ ನವರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.
ಕೋರ್ಟ್ ನಿರ್ಣಯವಾದರೂ ವಿಳಂಬವಾಗಲು ಕಾಂಗ್ರೆಸ್ ದುರ್ಬುದ್ಧಿ ಕಾರಣ. ನಮ್ಮ ರಾಜ್ಯದ ಕಾಂಗ್ರೆಸ್ ನವರು ಪಿತೂರಿ ಮಾಡುತ್ತಿದ್ದಾರೆ ಎಚ್. ಕೆ. ಪಾಟೀಲ, ಸಿದ್ದರಾಮಯ್ಯ , ಡಿಕೆಶಿ ಎಲ್ಲರೂ ಈ ಬಗ್ಗೆ ಮಾತನಾಡಬೇಕು. ಗುಂಡೂರಾವ್ ಅವರ ಹೇಳಿಕೆಗೆ ಕೈ ನಾಯಕರು ಸ್ಪಷ್ಟನೆ ಕೊಡಬೇಕು ಜೊತೆಗೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದರು.
Kshetra Samachara
01/11/2020 11:49 am