ನವಲಗುಂದ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಪ್ರಥಮ ವರ್ಷದ 120 ವಿದ್ಯಾರ್ಥಿಗಳಿಗೆ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿ ಉಚಿತ ಪಠ್ಯಪುಸ್ತಕ ನೀಡಿದ್ದಾರೆ.
ನಂತರ ಮಾತನಾಡಿದ ವಿನೋದ ಅಸೂಟಿ, ಕಾಲೇಜಿನಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಪಠ್ಯಪುಸ್ತಕಗಳ ಕೊರತೆಯಿಂದಾಗಿ ಅಭ್ಯಾಸಕ್ಕೆ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆ 120 ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ನೀಡಲಾಗಿದೆ. ಪಠ್ಯಪುಸ್ತಕಗಳ ಸದುಪಯೋಗ ಪಡೆದು ಒಳ್ಳೆಯ ಶಿಕ್ಷಣದಿಂದ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ, ಪ್ರಾಚಾರ್ಯ ಸಂಜುತಾ ಶಿರಸಂಗಿ, ಗ್ರಂಥಪಾಲಕ ಲತಾ ಪಾಟೀಲ್, ಪ್ರತಿಭಾ ನಿಲಗುಂದಿ, ಪುರಸಭೆ ಸದಸ್ಯರುಗಳಾದ ಮಹಾಂತೇಶ ಭೋವಿ, ರವಿ ಬೆಂಡಿಗೇರಿ, ಶಿವಾನಂದ ತಡಸಿ, ಸುಲೇಮಾನ ನಾಶಿಪುಡಿ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
08/03/2022 07:31 pm