ಹುಬ್ಬಳ್ಳಿ: ದಸರಾ ಹಬ್ಬ ಬಂತದ್ರೆ ಸಾಕು ಮಹಿಳೆಯರಿಗೆ ಎಲ್ಲಿಲ್ಲದ ಸಡಗರ, ಸಂಭ್ರಮ. ಒಂಬತ್ತು ದಿನಗಳ ಕಾಲ ವಿವಿಧ ಬಣ್ಣದ ಸೀರೆ ಉಟ್ಟು, ದೇವಿಗೆ ವಿಶೇಷ ಪೂಜೆ ಮಾಡುತ್ತಾರೆ. ಇದೇರೀತಿ ಹುಬ್ಬಳ್ಳಿ ನವನಗರದ ಪಂಚಾಕ್ಷರಿ ನಗರದ ನವಶಕ್ತಿ ಮಹಿಳಾ ಮಂಡಳವು ದಸರಾ ಹಬ್ಬದ ಪ್ರತಿ ದಿನವನ್ನು ವಿಶೇಷವಾಗಿ ಹೇಗೆಲ್ಲಾ ಸಂಭ್ರಮಿಸಿದ್ದಾರೆ ಎಂಬುದನ್ನು ತೋರಸ್ತೇವಿ ನೋಡಿ......
ಎಸ್.... ಎಲ್ಲಿ ನೋಡಿದ್ರು ಮಿರಿ ಮಿರಿ ಬಟ್ಟ ತೊಟ್ಟು ಮಿಂಚುತ್ತಿರುವ ಮಹಿಳೆಯರು... ಇನ್ನೊಂದು ಕಡೆ ದೀಪ ಹಚ್ಚಿ ದೇವಿ ಪೂಜೆ... ಮಕ್ಕಳಿಗೆ ಮತ್ತು ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಇಂತಹ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ನವನಗರದ ಪಂಚಾಕ್ಷರಿ ನಗರದಲ್ಲಿ. ಸಮಾಜ ಸೇವಕ ವಿಜಯಕುಮಾರ್ ಅಪ್ಪಾಜಿ ಜನಸೇವಾ ಸಂಘ ಹಾಗೂ ಪಂಚಾಕ್ಷರಿ ನಗರದ ನವಶಕ್ತಿ ಮಹಿಳಾ ಮಂಡಳ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ದಸರಾ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ... ಪ್ರತಿ ವರ್ಷ ಇಲ್ಲಿನ ನಿವಾಸಿಗಳು ಸೇರಿಕೊಂಡು ದಸರಾ ಹಬ್ಬವನ್ನು ವಿಶೇಷ ಹಾಗೂ ಡಿಫ್ರಂಟಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ... ಈ ವರ್ಷ ಅಂದರೇ ದಸರಾ ಹಬ್ಬಕ್ಕೆ ಇವರು ಮಾಡಿರುವ ಒಂದು ವಿಶೇಷ ಪೂಜೇ ಈಗ ಎಲ್ಲರ ಮನ ಗೆದ್ದಿದೆ. ವಿವಿಧ ಅವತಾರದಲ್ಲಿ 9 ದಿನಗಳೂ ವೈಭವೋಪೇತವಾಗಿ ಪೂಜಿಸಲ್ಪಡುವ ದೇವಿಗೆ, ಭಕ್ತರು ವಿವಿಧ ಹರಕೆ ಹೊತ್ತು, ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾ ಪ್ರತಿದಿನ ಒಂದೊಂದು ಅವತಾರದಲ್ಲಿ ಕಾಣು ಸಿಗುವ ದೇವಿಯ ವಿಶೇಷ ಬಗ್ಗೆ ಅವರೇ ಹೇಳುತ್ತಾರೆ ಕೇಳಿ...
ಇನ್ನು ಸಮಾಜ ಸೇವಕ ವಿಜಯಕುಮಾರ್ ಅಪ್ಪಾಜಿ ಪ್ರತಿಯೊಂದು ಸಮಯದಲ್ಲಿ ಮಹಿಳೆಯರ ಏಳಿಗಾಗಿ ಹಾಗೂ ಸಂರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ವಿಶೇಷವಾಗಿದೆ. ಮಹಿಳೆಯರು ವಿವಿಧ ಬಣ್ಣದ ಸೀರೆ ಉಟ್ಟು ರಾಜಸ್ತಾನಿ, ಗುಜರಾತಿನ ದಾಂಡಿಯಾ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಎಲ್ಲಾ ಕುಟುಂಬಗಳ ಭೇದ ಭಾವ ಮರೆತು, ಹಿರಿಯರು– ಕಿರಿಯರು ಎನ್ನದೆ ಒಟ್ಟಿಗೆ ಬೆರೆತು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕುವುದು ಇಲ್ಲಿ ವಿಶೇಷವಾಗಿತ್ತು. ಇದಕ್ಕೆ ಸಮಾಜ ಸೇವಕ ವಿಜಯಕುಮಾರ್ ಅಪ್ಪಾಜಿ ಅವರು ಕೂಡ ನವಶಕ್ತಿ ಮಹಿಳಾ ಮಂಡಳ ಅವರಿಗೆ ಸಾತ್ ಕೂಡ ನೀಡಿದ್ದಾರೆ...
ಅಷ್ಟೇ ಅಲ್ಲದೇ ಈ ದಸರಾ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ, ನಿವೃತ್ತಿ ಹೊಂದಿದ ಹಿರಿಯ ನಾಗರಿಕರಿಗೆ ವಿಜಯಕುಮಾರ್ ಅಪ್ಪಾಜಿ ನೇತೃತ್ವದಲ್ಲಿ ಸನ್ಮಾನ ಮಾಡಿ ಗೌರವ ಸಲ್ಲಿಸಿದರು. ಹಾಗೂ ಪುಟ್ಟ ಮಕ್ಕಳಿಗೆ ಬುಕ್ ಪೆನ್ ವಿತರಣೆ ಮಾಡುವ ಮೂಲಕ ಅವರಿಗೂ ಕೂಡ ಉಡಿ ತುಂಬಿದರು. ಹಾಗೂ ಮತ್ತೈದಿರಿಗೆ ಉಡಿ ತುಂಬುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು. ನೂರಕ್ಕೂ ಹೆಚ್ಚು ಮಹಿಳೆಯರು ಈ ದಸರಾ ಹಬ್ಬದಲ್ಲಿ ಭಾಗಿಯಾಗಿ ದಾಂಡಿಯಾ ನೃತ್ಯ ಮಾಡಿ ಯಾರಿಗೇನು ನಾವೂ ಕಡಿಮೆ ಇಲ್ಲ ಎಂಬುದನ್ನಾ ತೋರಿಸಿಕೊಟ್ಟರು. ವಿಜಯಕುಮಾರ್ ಅಪ್ಪಾಜಿ ಅವರ ಸಮಾಜಮುಖಿ ಕಾರ್ಯಕ್ಕೆ ಮಹಿಳೆಯರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಒಂಬತ್ತು ದಿನದಗಳ ವಿಭಿನ್ನವಾಗಿ, ವಿಶಿಷ್ಟವಾಗಿ ದೇವಿಯ ಪೂಜೆ ಮಾಡುವುದರ ಮೂಲಕ, ದಸರಾ ಹಬ್ಬಕ್ಕೆ ಮೆರಗು ತಂದ ವಿಜಯಕುಮಾರ್ ಅಪ್ಪಾಜಿ ಸಂಘ ಹಾಗೂ ಪಂಚಾಕ್ಷರಿ ನಗರದ ನವಶಕ್ತಿ ಮಹಿಳಾ ಮಂಡಳ ಕಾರ್ಯವನ್ನು ಎಲ್ಲರೂ ಮೆಚ್ಚಲೇಬೇಕು.
Kshetra Samachara
05/10/2022 07:43 am