ಧಾರವಾಡ: ಶ್ರೀ ಚೆನ್ನಬಸವೇಶ್ವರ ಕಂಚಿನ ಪುತ್ಥಳಿ ಧಾರವಾಡದಲ್ಲಿ ಅನಾವರಣಗೊಂಡಿದೆ. ಶ್ರೀ ಚೆನ್ನಬಸವೇಶ್ವರ ದೇವಸ್ಥಾನ ಇಲ್ಲಿದ್ದು ಬಹಳ ವರ್ಷಗಳೇ ಸಂದಿವೆ. ಆ ದೃಷ್ಟಿಯಿಂದ ಶ್ರೀ ಚೆನ್ನಬಸವಣ್ಣನವರ ಪುತ್ಥಳಿ ಸಹಜವಾಗಿಯೇ ಲೋಕಾರ್ಪಣೆಗೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಯಿ ಹೇಳಿದರು.
ಧಾರವಾಡದಲ್ಲಿ ಶ್ರೀ ಚೆನ್ನಬಸವೇಶ್ವರ ಪುತ್ಥಳಿ ಅನಾವರಣಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಉಳವಿ ಶ್ರೀ ಚೆನ್ನಬಸವೇಶ್ವರ ದೇವಸ್ಥಾನದ ಕುರಿತ ವಿಚಾರಗಳನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು. ಇನ್ನು, ಉಳವಿ ಅಭಿವೃದ್ಧಿ ಅಲ್ಲದೆ ಈ ಭಾಗದ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ನಾನಾ ಯೋಜನೆ ಹಾಕಿಕೊಂಡಿದೆ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಶಿಕ್ಷಕರ ಪಶ್ಚಿಮ ಕ್ಷೇತ್ರದ ಟಿಕೆಟ್ ಬಸವರಾಜ ಹೊರಟ್ಟಿಗೋ ಅಥವಾ ಮೋಹನ ಲಿಂಬಿಕಾಯಿಗೋ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, "ಎಲ್ಲವನ್ನೂ ಎರಡು ದಿನ ಕಾದು ನೋಡಿ..." ಎಂದು ಹೇಳಿ ಹೊರಟು ಹೋದರು.
Kshetra Samachara
15/05/2022 05:31 pm