ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶಾಸಕ ಬೆಲ್ಲದ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು

ಧಾರವಾಡ: ಹುಬ್ಬಳ್ಳಿ ತಾಲೂಕಿನ ಅಮರಗೋಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಅರವಿಂದ ಬೆಲ್ಲದ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಅಮರಗೋಳದಲ್ಲಿ ನಿರ್ಮಿಸಲಾಗಿರುವ ಆಶ್ರಯ ಕಾಲೊನಿಗೆ ಈಗಾಗಲೇ ಮಹಾತ್ಮ ಗಾಂಧಿ ಆಶ್ರಯ ಕಾಲೊನಿ ಎಂದು ಹೆಸರಿಡಲಾಗಿದ್ದು,

ಅದನ್ನು ಅಟಲ್ ಬಿಹಾರಿ ವಾಜಪೇಯಿ ಆಶ್ರಯ ಕಾಲೊನಿ ಎಂದು ಬದಲಾವಣೆ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರ ಮನವೊಲಿಸಲು ಬಂದ ಶಾಸಕ ಅರವಿಂದ ಬೆಲ್ಲದ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಯಕರ್ತರು,

ಕಾಂಗ್ರೆಸ್ ಸರ್ಕಾರ ಇದ್ದಾಗ ಈ ಕಾಲೊನಿಗೆ ಮಹಾತ್ಮ ಗಾಂಧಿ ಆಶ್ರಯ ಕಾಲೊನಿ ಎಂದು ನಾಮಕರಣ ಮಾಡಲಾಗಿದೆ.

ಬೇಕಾದರೆ ನೀವು ಬೇರೆ ಆಶ್ರಯ ಕಾಲೊನಿ ಮಾಡಿ ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಆಶ್ರಯ ಕಾಲೊನಿ ಎಂದು ಹೆಸರಿಟ್ಟುಕೊಳ್ಳಿ ಎಂದು ಶಾಸಕರನ್ನು ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.

Edited By : Manjunath H D
Kshetra Samachara

Kshetra Samachara

25/12/2020 01:01 pm

Cinque Terre

60.67 K

Cinque Terre

27

ಸಂಬಂಧಿತ ಸುದ್ದಿ