ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದಲ ಹಂತದ ಚುನಾವಣೆ ಮತದಾನ- ಅವಿರೋಧ ಆಯ್ಕೆ ಹಾಗೂ ಚುನಾವಣೆ ನಡೆಯುವ ಕ್ಷೇತ್ರ, ಅಭ್ಯರ್ಥಿಗಳೇಷ್ಟು ಗೊತ್ತಾ..?

ಹುಬ್ಬಳ್ಳಿ: ರಾಜ್ಯ ಚುನಾವಣಾ ಅಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಇಂದು ನಡೆಯುವ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗಳು ಧಾರವಾಡ, ಕಲಘಟಗಿ ಹಾಗೂ ಅಳ್ನಾವರ ತಾಲ್ಲೂಕಿನಲ್ಲಿ ಜರುಗಲಿದ್ದು, ಒಟ್ಟು 48 ಅಭ್ಯರ್ಥಿಗಳು ಅವಿರೋದ್ಧ ಆಯ್ಕೆಯಾಗಿದ್ದು, ಅಂತಿಮವಾಗಿ 2,747 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಧಾರವಾಡ ತಾಲ್ಲೂಕಿನ 34 ಗ್ರಾಮ ಪಂಚಾಯತಿಗಳಲ್ಲಿ 190 ಕ್ಷೇತ್ರಗಳಿಗಾಗಿ ಒಟ್ಟು 533 ಸದಸ್ಯ ಸ್ಥಾನಗಳಿದ್ದು, ಅದರಲ್ಲಿ ಮೂರು ಕ್ಷೇತ್ರಗಳೂ ಸೇರಿದಂತೆ ಒಟ್ಟು 30 ಸದಸ್ಯ ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತು ಉಳಿದ 503 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತಗಳಲ್ಲಿ ಸ್ಪರ್ಧಿಸಿರುವ 1602 ಅಭ್ಯರ್ಥಿಗಳ ಪೈಕಿ 902 ಸಾಮಾನ್ಯ ಹಾಗೂ 700 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಅಳ್ನಾವರ ತಾಲೂಕು : ತಾಲ್ಲೂಕಿನ 4 ಗ್ರಾಮ ಪಂಚಾಯತಿಗಳಲ್ಲಿನ 16 ಕ್ಷೇತ್ರಗಳಿಗಾಗಿ ಒಟ್ಟು 47 ಸದಸ್ಯ ಸ್ಥಾನಗಳಿದ್ದು ಅದರಲ್ಲಿ, ಒಂದು ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತು ಉಳಿದ 46 ಸದಸ್ಯ ಸ್ಥಾನಗಳಿಗಾಗಿ ಚುನಾವಣೆಯು ಜರುಗಲಿದೆ.

ಅಳ್ನಾವರ ತಾಲೂಕಿನ 4 ಗ್ರಾಮ ಪಂಚಾಯತಗಳಲ್ಲಿ ಸ್ಪರ್ಧಿಸಿರುವ 156 ಅಭ್ಯರ್ಥಿಗಳ ಪೈಕಿ 88 ಸಾಮಾನ್ಯ ಹಾಗೂ 68 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಕಲಘಟಗಿ ತಾಲೂಕು : ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳಲ್ಲಿನ 123 ಕ್ಷೇತ್ರಗಳಿಗಾಗಿ ಒಟ್ಟು 340 ಸದಸ್ಯ ಸ್ಥಾನಗಳಿದ್ದು, 17 ಸದಸ್ಯ ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತು ಉಳಿದ 323 ಸದಸ್ಯ ಸ್ಥಾನಗಳಿಗಾಗಿ ಚುನಾವಣೆಯು ಜರುಗಲಿದೆ.

Edited By : Nirmala Aralikatti
Kshetra Samachara

Kshetra Samachara

22/12/2020 07:46 am

Cinque Terre

42.6 K

Cinque Terre

1

ಸಂಬಂಧಿತ ಸುದ್ದಿ