ಕಲಘಟಗಿ: ಮಡ್ಕಿಹೊನ್ನಳ್ಳಿ ಗ್ರಾಮ ಪಂಚಾಯಿತಿಯ ಸರ್ವಾಂಗೀಣ ಅಭಿವೃದ್ಧಿ ಗೆ ಕಂಕಣಬದ್ಧರಾಗಿರುವ ಸಾಮಾಜಿಕ ಕಳಕಳಿಯ
ಪರಮಾನಂದ ಮಲ್ಲಿಕಾರ್ಜುನ ವಡೆಯರ ಗ್ರಾಮಸ್ಥರ ಸಹಕಾರವೇ ತಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಗ್ರಾಮ ಪಂಚಾಯತಿ ಎರಡನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಆಯ್ಕೆ ಬಯಸಿದ್ದಾರೆ.
ಮಡ್ಕಿಹೊನ್ನಳ್ಳಿ ನಿವಾಸಿಯಾಗಿರುವ ಇವರು ಚಾಲಕ ವೃತ್ತಿ ಯಿಂದಲೇ ಪರಿಶ್ರಮದಿಂದ ಬದಕು ಕಟ್ಟಿಕೊಂಡು,ರಂಗ ಕಲಾವಿದರಾಗಿ,ಉದ್ಯಮಿದಾರರಾಗಿ ಹೆಸರು ಮಾಡಿದ್ದಾರೆ.ಇಷ್ಟೇಲ್ಲ ಇದ್ದರು ಸಹ ಜನರಿಗೆ ಒಳ್ಳೆಯ ಕೆಲಸಮಾಡ ಬೇಕು,ಗ್ರಾಮದ ಸುಧಾರಣೆಯಾಗ ಬೇಕು ಎಂಬ ತುಡಿತದಿಂದ ಜನರ ಸಹಕಾರದಿಂದ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಶ್ರೀ ಗುರು ಸೋಮಲಿಂಗೇಶ್ವರ ಸಾಂಸ್ಕೃತಿಕ ಕಲಾ ಸಂಘದ ಮೂಲಕ ಹಲವಾರು ಸಾಮಾಜಿಕ,ಕನ್ನಡಪರ ಸೇವೆ ಸಲ್ಲಿಸುತ್ತಾ ಬಂದಿದ್ದು,ಬಸವ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಚಾಣಕ್ಯ ಪ್ರಶಸ್ತಿ ಯಂತಹ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಒಲಿದು ಬಂದಿವೆ.
ಮಡ್ಕಿಹೊನ್ನಳ್ಳಿ ಅಭಿವೃದ್ಧಿ ಒಂದೇ ಗುರಿ ಎಂದ ಪರಮಾನಂದ ವಡೆಯರ
ಗ್ರಾಮಕ್ಕೆ ಬಸ್ ಸೌಲಭ್ಯ, ಗಟಾರ,ವಿದ್ಯುತ್ ದೀಪ,ಬಡವರಿಗೆ ಆಶ್ರಯ ಮನೆ,ಹೊಲದ ರಸ್ತೆ ಸುಧಾರಣೆ,ಗ್ರಾಮದ ರಸ್ತೆ ಅಭಿವೃದ್ಧಿ,ಕೆರೆ ಸ್ವಚ್ಚತೆ,ವಾರ್ಡ್ ನಲ್ಲಿ ಕಾಂಕ್ರೀಟ್ ರಸ್ತೆ,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬಿಪಿಎಲ್ ಕಾರ್ಡ್, ಜನರಿಗೆ ಯೋಜನೆಗಳನ್ನು ಮನೆ ಬಾಗಿಲಿಗೆ ತರುವ ಸಂಕಲ್ಪ ಹೊಂದಿದ್ದಾರೆ.
ಜನಾನೂರಾಗಿಯಾಗಿರುವ ಪರಮಾನಂದ ಒಡೆಯರ ಜನರ ಆಶಿರ್ವಾದವೇ ತಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಚುನಾವಣೆಯಲ್ಲಿ ಹುರಿಯಾಳಾಗಿದ್ದಾರೆ ಅಷ್ಟೇ ಅಲ್ಲ ಗ್ರಾಮಾಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಮಾಡಲು ವಾಗ್ದಾನವನ್ನು ಮಾಡಿದ್ದಾರೆ.
ಪ್ರಿಯ ! ಮತದಾರ ಬಾಂಧವರೆ ! ಮಡ್ಕಿಹೊನ್ನಳ್ಳಿ ಗ್ರಾ ಪಂಗೆ ೨೨-೧೨-೨೦೨೦ ರಂದು ನಡೆಯುವ ಚುನಾವಣೆಯಲ್ಲಿ ಎರಡನೇ ವಾರ್ಡ್ ನಿಂದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಗುರ್ತಾದ ಕಬ್ಬಿನ ರೈತ ಚಿನ್ಹೆಗೆ ನಿಮ್ಮ ಅತ್ಯಮೂಲ್ಯವಾದ ಮತವನ್ನು ಕೊಟ್ಟು ಪ್ರಚಂಡ ಬಹುಮತದಿಂದ ಆರಿಸಿತರಲು ಕಳಕಳಿಯಿಂದ ಗ್ರಾಮಸ್ಥರಲ್ಲಿ ವಿನಂತಿಸಿದ್ದಾರೆ ಅಭ್ಯರ್ಥಿ ಪರಮಾನಂದ ವಡೆಯರ.
Kshetra Samachara
20/12/2020 10:13 pm