ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗ್ರಾಪಂ ಚುನಾವಣೆ- ಎಡಗೈ ಹೆಬ್ಬೆರಳಿಗೆ ಶಾಯಿ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ಎರಡು ಹಂತದಲ್ಲಿ ನಡೆಯಲಿದ್ದು ಮೊದಲನೇ ಹಂತದ ಚುನಾವಣೆಗಳು ಡಿಸೆಂಬರ್ 22ಕ್ಕೆ ಮತ್ತು ಎರಡನೇ ಹಂತದ ಚುನಾವಣೆಗಳು ಡಿಸೆಂಬರ್ 27ಕ್ಕೆ ನಡೆಯಲಿವೆ.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ, ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ 1993 ರ ನಿಯಮ 52ರ ಅನುಸಾರ ಮತದಾರನ ಎಡಗೈ ತೋರು ಬೆರಳಿಗೆ ಅಥವಾ ರಾಜ್ಯ ಚುನಾವಣಾ ಆಯೋಗವು ನಿರ್ಧಿಷ್ಟಪಡಿಸಿದ ಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಮಾಡಬೇಕಾಗುತ್ತದೆ. ಆದರೆ, ಇತ್ತೀಚಿಗೆ ಕೆಲವು ವಿಧಾನಸಭಾ ಉಪಚುನಾವಣೆಗಳು ಹಾಗೂ ವಿಧಾನ ಪರಿಷತ್ತಿಗೆ ಚುನಾವಣೆಗಳು, ಕೆಲವು ಸಹಕಾರ ಸಂಘದ ಚುನಾವಣೆಗಳು ನಡೆದಿದ್ದು ಮತದಾರರಿಗೆ ಅಳಿಸಲಾಗದ ಶಾಯಿಯನ್ನು ಹಾಕಿರುವುದರಿಂದ ಪ್ರಸ್ತುತ ನಡೆಯಲಿರುವ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಮತದಾನ ಮಾಡುವ ಮತದಾರರಿಗೆ ಅಳಿಸಲಾಗದ ಶಾಯಿಯನ್ನು ಎಡಗೈ ಹೆಬ್ಬೆರಳಿಗೆ ಹಚ್ಚುವಂತೆ ಚುನಾವಣಾ ಆಯೋಗವು ನಿರ್ಧಿಷ್ಟಪಡಿಸಿದೆ.

ಅದರಂತೆ ಗ್ರಾಮ ಪಂಚಾಯತ ಚುನಾವಣೆಗಳಲ್ಲಿ ಮತದಾನ ಮಾಡುವ ಮತದಾರನ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲಾಗುತ್ತದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

20/12/2020 05:59 pm

Cinque Terre

19.65 K

Cinque Terre

1

ಸಂಬಂಧಿತ ಸುದ್ದಿ