ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿಯಿಂದಲೇ ಸ್ಪರ್ಧೆ: ಸಂತೋಷ ಲಾಡ್

ಕಲಘಟಗಿ:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿಯಿಂದಲೇ ಕಣಕ್ಕಿಳಿಯುತ್ತೇನೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದರು.

ಕಲಘಟಗಿ ತಾಲೂಕಿನ ಮಡಿಕಿಹೊನ್ನಳ್ಳಿ ಗ್ರಾಮದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿಯಲ್ಲಿ ಸ್ಪರ್ಧಿಸುತ್ತೇನೆ,ಇದರಲ್ಲಿಯಾವುದೇ ಸಂಶಯ ಬೇಡ ಮತ್ತು ಕಲಘಟಗಿಯಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತಾವು ಶಾಸಕರಾಗಿದ್ದಾಗ, ಮಂಜೂರಿಯಾದ ಅಂದಾಜು 5 ಕೋಟಿ ವೆಚ್ಚದ ಬಸ್ ಡಿಪೋ ಪ್ರಾರಂಭವಾಗಿಲ್ಲ ಮತ್ತು ಅಂದಾಜು 180 ಕೋಟಿ ವೆಚ್ಚದ ಬೇಡ್ತಿ ಹಳ್ಳದಿಂದ ‌ಕೆರೆ ತುಂಬಿಸುವ ಜೋಡಣೆ ಕಾಮಗಾರಿ ನನೆಗುದಿಗೆ ಬಿದ್ದಿವೆ. ಹಾಗೂ ರಸ್ತೆಗಳು ಹಾಳಾಗಿವೆ ರಸ್ತೆ ರಿಪೇರಿ ಮುಂತಾದ ಸಮಸ್ಯೆಗಳನ್ನು ಬೇಗನೆ ಸರಿಪಡಿಸ ಬೇಕಿದೆ. ಕ್ಷೇತ್ರದ ಶಾಸಕ ಶಾಸಕ ಸಿ ಎಂ ನಿಂಬಣ್ಣನವ ರಾಜ್ಯದಲ್ಲಿ ತಮ್ಮದೇ ಸರಕಾರ,ತಮ್ಮದೇ ಮುಖ್ಯಂತ್ರಿ ಹೊಂದಿದ್ದಾರೆ, ನನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿ ಶೀಘ್ರ ಸರಿಪಡಿಸದೆ ಹೋದರೆ ಉಗ್ರ ಹೋರಾಟ ನಡೆಸುವುದಾಗಿ ಲಾಡ್ ತಿಳಿಸಿದರು.

ಕಲಘಟಗಿ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸುಮಾರು ಶೇ 70 ರಷ್ಟು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಂದರ್ಭದಲ್ಲಿ ಮಂಜುನಾಥ ‌ಮುರಳ್ಳಿ, ಎಸ್ ಆರ್ ಪಾಟೀಲ, ಹರಿಶಂಕರ, ಶ್ರೀಕಾಂತ ಗಾಯಕವಾಡ, ಸೋಮಣ್ಣ ಬೆನ್ನೂರ, ಬಾಳು‌ ಖಾನಾಪುರ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

20/12/2020 12:29 pm

Cinque Terre

61.11 K

Cinque Terre

2

ಸಂಬಂಧಿತ ಸುದ್ದಿ