ಹುಬ್ಬಳ್ಳಿ:ವಿಧಾನ ಪರಿಷತ್ ಇತಿಹಾಸದಲ್ಲಿಯೇ ಈ ರೀತಿಯ ವಿಷಾದಕರ ಘಟನೆ ನಡೆದದ್ದು ಇದೇ ಮೊದಲು.
ಪರಿಷತ್ ನಲ್ಲಿ ಬಿಜೆಪಿ,ಜೆಡಿಎಸ್ ಗೆ ಬಹುಮತ ಇರಲಿಲ್ಲ ವೆಂದು ರಾಜ್ಯದ ಜನರೆದುರು ಡಿ ಕೆ ಸಿ ಹಾಗೂ ಸಿದ್ದರಾಮಯ್ಯ ಸ್ಪಷ್ಟಪಡಿಸಲಿ.ಅವಿಶ್ವಾಸ ಪತ್ರವನ್ನು ಮೊದಲೆ ಕೊಟ್ಟಿದ್ದು, ಪರಿಗಣನೆಗೆ ತೆಗೆದುಕೊಳ್ಳದೆ ಅಜೆಂಡಾದಲ್ಲಿ ಯಾಕೆ ತರಲಿಲ್ಲ, ಇದೊಂದು ವ್ಯವಸ್ಥಿತ ಸಂಚು ಎಂದು ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಗೆ ಭೇಟಿ ನೀಡಿದ ಅವರು,ಪರಿಷತ್ ನಲ್ಲಿ ನಡೆದ ಗಲಾಟೆ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು,
ಬಂಡತನದಿಂದ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಮಾಡಿದ ಕುತಂತ್ರ ರಾಜಕಾರಣವಿದು.ಜೆಡಿಎಸ್ ಬಿಜೆಪಿ ಒಂದಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ.ಪ್ರತಾಪ್ ಚಂದ್ರ ಶೆಟ್ಟಿ ಸಜ್ಜನ ರಾಜಕಾರಣಿ, ಅವರಿಗೂ ಕಪ್ಪು ಚುಕ್ಕೆ ಬರುವಂತೆ ಮಾಡಿದ್ದಾರೆ, ಇದೊಂದು ಪೂರ್ವನಿಯೋಜಿತ ಸಂಚು ಎಂದು ಕಿಡಿ ಕಾರಿದರು.
ಬಹುಮತವಿಲ್ಲದೆ ಅಲ್ಪಸಂಖ್ಯಾತರಾದ ಬಳಿಕ ರಾಜೀನಾಮೆ ಕೊಡಬೇಕಿತ್ತು.ಪರಿಷತ್ ನಲ್ಲಿ ನಡೆದ ಘಟನೆಗೆ ಸಿದ್ದರಾಮಯ್ಯ ಮತ್ತು ಡಿಕೆಸಿ ಕ್ಷಮೆ ಕೇಳಬೇಕು ಹಾಗೂ ಮುಂದೆ ಹೀಗೆ ಮಾಡಲ್ಲವೆಂದು ಹೇಳಿಕೆ ನೀಡಬೇಕು.ಬಹುಮತ ಇಲ್ಲದಿರುವವರನ್ನು ಮುಂದುವರಿಸಲು ಸಾದ್ಯವೆ ಇಲ್ಲ.ದಾದಾಗಿರಿ ಮಾಡಿಕೊಂಡು ಬಹುಮತ ಇಲ್ಲದಿದ್ದರೂ ನಾವು ಸಭಾಪತಿಯನ್ನು ಮುಂದುವರಿಸಿಕೊಂಡು ಹೋಗುತ್ತೆವೆ ಎನ್ನುವುದನ್ನ ಜನ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಷತ್ ಗೆ ಅದರದ್ದೆ ಮಹತ್ವವಿದೆ.ಈ ಕುತಂತ್ರ ರಾಜಕಾರಣ ದೇಶದ ಜನರಿಗೆ ಮಾಡಿದ ದ್ರೋಹ.
ಪ್ರತಾಪ್ ಚಂದ್ರ ಶೆಟ್ಟರು ಅವರೇ ರಾಜಿನಾಮೆ ಕೊಡಬೇಕಿತ್ತು.ರಾಜೀನಾಮೆ ಕೊಟ್ಟ ಬಳಿಕ ಯಾರು ಸಭಾಪತಿ ಆಗಬೇಕು ಎನ್ನುವುದು ಜೆಡಿಎಸ್ ಮತ್ತು ಬಿಜೆಪಿಯವರು ಕುಳಿತು ಚರ್ಚೆ ಮಾಡಿ ನಿರ್ಧಾರ ಮಾಡುತ್ತೆವೆ ಎಂದರು.
ಗ್ರಾಮ ಪಂಚಾಯತಿ ಚುನಾವಣೆ ಕುರಿತು ಮಾತನಾಡಿದ ಅವರು,ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಶೇಕಡಾ 80 ರಷ್ಟು ಸ್ಥಾನಗಳನ್ನ ಗೆಲ್ಲುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Kshetra Samachara
18/12/2020 01:22 pm