ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪರಿಷತ್ ಗಲಾಟೆ ನಾಚಿಕೆ ತರಿಸುಂತದ್ದು

ಧಾರವಾಡ: ವಿಧಾನ ಪರಿಷತ್ ನಲ್ಲಿ ಮೊನ್ನೆ ನಡೆದ ಘಟನೆ ನಾಚಿಕೆ ತರಿಸುವಂತದ್ದು. ಅಂತದೊಂದು ಘಟನೆಯನ್ನು ನನ್ನ ಜೀವನದಲ್ಲಿ ಕಂಡಿರಲಿಲ್ಲ.

ಆ ಘಟನೆಯಿಂದ ನನ್ನ ಕಣ್ಣಲ್ಲಿ ನೀರು ಬಂತು ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ಮಾದರಿಯಾದ ಮೇಲ್ಮನೆಯಲ್ಲಿ ಇಂತಹ ಘಟನೆ ನಡೆದದ್ದು ದುರದೃಷ್ಟಕರ.

ನಾನು ಈಗಾಗಲೇ ರಾಜ್ಯದ ಜನರ ಕ್ಷಮೆ ಸಹ ಕೇಳಿದ್ದೇನೆ. ವಿಧಾನ ಪರಿಷತ್ ಅನ್ನೋದು ಕಾರ್ಪೋರೇಶನ್ ಹಂತಕ್ಕೆ ಬಂದಿದೆ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ವಿಧಾನ ಪರಿಷತ್ ದೇಶದಲ್ಲಿ ಅತ್ಯಂತ ಗೌರವ ಪಡೆದಿದೆ. 113 ವರ್ಷದ ಇತಿಹಾಸದ ಈ ಪರಿಷತ್​ನಲ್ಲಿ ಹೀಗೆ ಆಗಿದ್ದು ನೋವಾಗಿದೆ.‌ ಗಲಾಟೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಅಂತ ಒತ್ತಾಯ ಮಾಡಿದ್ದೇವೆ ಎಂದರು.

ವಿದ್ಯಾಗಮ ಆರಂಭ ಹಿನ್ನೆಲೆ ಸಚಿವರ ಜೊತೆ ಈಗಾಗಲೇ ಮಾತನಾಡಿದ್ದೇವೆ. 50 ವಿದ್ಯಾರ್ಥಿಗಳ ಬದಲು 10 ವಿದ್ಯಾರ್ಥಿಗಳನ್ನು ಬೇರೆ ಬೇರೆ ಕೂರಿಸಿ ಪಾಠ ಮಾಡೋದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದರು.

Edited By : Manjunath H D
Kshetra Samachara

Kshetra Samachara

17/12/2020 05:36 pm

Cinque Terre

24.92 K

Cinque Terre

0

ಸಂಬಂಧಿತ ಸುದ್ದಿ