ಅಣ್ಣಿಗೇರಿ : ತಾಲೂಕಿನ ಬಸಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಮನೆ ಬಾಗಿಲ ಮುಂದೆ ವಾಮಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೆಳಗಿನ ಜಾವ ಪಾರ್ಶ್ವನಾಥ ಜೈನರ್ ಅವರ ಮನೆ ಎದುರು ಮಾಟದ ವಿಷಯ ತಿಳಿಯುತ್ತಿದ್ದಂತೆಯೆ ಗ್ರಾಮಸ್ಥರು ತಂಡೋಪ ತಂಡವಾಗಿ ಅವರ ಮನೆ ಮುಂದೆ ಜಮಾಯಿಸಿದರು. ಮನೆಯವರು ಭಯಭೀತರಾಗಿದ್ದಾರೆ.
ಕೇವಲ ನಾಮಪತ್ರ ಸಲ್ಲಿಸಿದ್ದಕ್ಕೆ ಮಾಟ ಮಾಡಿಸಿದ್ದಾರೆ ಇನ್ನೇನಾದರೂ ಚುನಾವಣೆಯಲ್ಲಿ ಗೆದ್ದು ಬಂದರೆ ಮತ್ತೇನಾದರೂ ಮಾಡಬಹುದೆಂಬ ಭಯದಲ್ಲಿ ಗ್ರಾಮಸ್ಥರು ಆಡಿಕೊಳ್ಳುತ್ತಿದ್ದರು.
ಪಕ್ಷೇತರ ಅಭ್ಯರ್ಥಿ ಪಾರ್ಶ್ವನಾಥ ಜೈನರ ಇವರ ಮನೆ ಎದುರುಗಡೆ ಮಂಗಳವಾರ ರಾತ್ರಿಯಂದು ಮನೆಯ ಬಾಗಿಲಲ್ಲಿ ಲಿಂಬೆ ಹಣ್ಣು, ಕೆಂಪು ಮೆಣಸಿನಕಾಯಿ, ಕುಂಕುಮ, ಸೂಜಿ, ಕೇರು ಬೀಜ ಹಾಗೂ ಉಪ್ಪು ಹಾಕಿ ವೃತ್ತಾಕಾರದಲ್ಲಿ ನಾನಾ ತರಹದ ವಾಮಾಚಾರ (ಮಾಟ) ಮಾಡಿಸಿದ್ದಾರೆ.
ಇದರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಪಾರ್ಶ್ವನಾಥ ಅವರು ಸೋಲಲಿ ಎಂದು ಮಾಟ ಮಾಡಿಸಿದ್ದಾರೆ.
ಎಂದು ಗ್ರಾಮಸ್ಥರು ಬೆಳಗಿನ ಅಷ್ಟೇ ಅಲ್ಲದೆ ಅವರಿಗೆ ಸೂಚಕರನ್ನು ನೇಮಕ ಮಾಡಿರುವ ಮುನ್ನಾಸಾಬ ಎಂಬುವರ ಮನೆಯ ಬಾಗಿಲು ಎದುರು ಮಾಟ ಮಾಡಿಸಿ ಇಟ್ಟಿದ್ದಾರೆ.
ಹೀಗೆ ಒಟ್ಟಾರೆಯಾಗಿ ಗ್ರಾಮದಲ್ಲಿ ಮೂರು ಕಡೆಯಲ್ಲಿ ಮಾಟವನ್ನು ಮಾಡಿಸಿ ಇಟ್ಟಿದ್ದಾರೆ ಎಂಬುವುದು ತಿಳಿದುಬಂದಿದೆ.
Kshetra Samachara
17/12/2020 01:35 pm