ಹುಬ್ಬಳ್ಳಿ- ನೇರನೇಮಕಾತಿ ಮಾಡಿಕೊಳ್ಳದ ಪೌರಕಾರ್ಮಿಕರನ್ನು ನೇಮಕಗೊಳಿಸಲು ಆಗ್ರಹಿಸಿ, ಕಾರ್ಮಿಕರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.
ನೇರ ವೇತನ ಪಾವತಿ ಅಡಿಯಲ್ಲಿ 1001 ಗುತ್ತಿಗೆ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ನೇಮಕಾತಿಗೊಳಿಸಿದ ನಂತರ ಉಳಿದ 738 ಪೌರಕಾರ್ಮಿಕರನ್ನು ಪಾಲಿಕೆ ಅಧಿಕಾರಿಗಳು ನೇಮಕ ಮಾಡಿಕೊಳ್ಳದೇ ಅನ್ಯಾಯ ಮಾಡುತ್ತಿದ್ದಾರೆ.
ಕೂಡಲೇ ನಮ್ಮನ್ನು ಕೂಡ ನೇರವೇತನ ಅಡಿ ನೇಮಕಗೊಳಿಸಬೇಕೆಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
Kshetra Samachara
16/12/2020 06:27 pm