ಹುಬ್ಬಳ್ಳಿ- ತೆಲಗು ಪೋಷಕ ನಟ ವಿಜಯರಂಗರಾಜ ಕನ್ನಡದ ಮೇರುನಟರಾದ ದಿ. ಡಾ. ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿ ಮತ್ತು ಸುಳ್ಳು ಮಾಹಿತಿಯನ್ನು ತೆಲಗು ಯುಟುಬ್ ಅಂತರ್ಜಾಲದಲ್ಲಿ ಮಾತನಾಡಿದನ್ನು ವಿರೋಧಿಸಿ ಹುಬ್ಬಳ್ಳಿಯ ವಿಷ್ಣು ಅಭಿಮಾನಿಗಳು, ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ವಿಜಯರಂಗರಾಜ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಚಪ್ಪಲಿಯಿಂದ ಹೊಡೆಯುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು..
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ಸುರೇಶ ಗೋಕಾಕ, ಅಮೃತ ಇಜಾರೆ, ವಿಷ್ಣು ಸೇನಾ ಅಧ್ಯಕ್ಷ ಮೃತ್ಯುಂಜಯ ಹಿರೇಮಠ ಮತ್ತು ಹಲಾವರು ಅಭಿಮಾನಿಗಳು ಇದ್ದರು...
Kshetra Samachara
13/12/2020 02:21 pm