ಹುಬ್ಬಳ್ಳಿ: ಗ್ರಾಮ ಸ್ವರಾಜ್ಯ ಅಭಿಯಾನ ಕಾಂಗ್ರೆಸ್ಸಿನ ಕೂಸು.ಮಹಾತ್ಮ ಗಾಂಧಿಯವರು ಜಾರಿಗೆ ತಂದಿರುವ ಗ್ರಾಮ ಸ್ವರಾಜ್ಯವನ್ನು ಬಿಜೆಪಿಯವರು ಈಗ ರಾಜಕೀಯ ಲಾಭಕ್ಕಾಗಿ ನಾವು ಜಾರಿಗೆ ತಂದಿದ್ದೇವೆ ಎಂದು ಬಿಜೆಪಿ ಗ್ರಾಮ ಸ್ವರಾಜ್ಯ ಅಭಿಯಾನವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನಗರದಲ್ಲಿಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಗ್ರಾಮ ಪಂಚಾಯತ ವ್ಯವಸ್ಥೆ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಗ್ರಾಮದ ಆಡಳಿತ ಜನರ ಕೈಯಲ್ಲಿ ಇರಬೇಕೆಂದು ಜಾರಿಗೆ ತಂದಿದ್ದು ಕಾಂಗ್ರೆಸ್ ಆದರೇ ಬಿಜೆಪಿಯವರು ಯಾವತ್ತು ರಾಜಕೀಯ ಮೀಸಲಾತಿ ಪರವಾಗಿದ್ದವರಲ್ಲ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ರಾಜಕೀಯ ಮೀಸಲಾತಿ ಕಾಂಗ್ರೆಸ್ ನ ಕೊಡುಗೆಯಾಗಿದೆ. ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರಿಕರಣ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಲ್ಲ. ಗ್ರಾಮಸ್ವರಾಜ್ಯ ಕಾಂಗ್ರೆಸ್ ನ ಕೂಸು, ಅದು ಬಿಜೆಪಿಗೆ ಸಂಬಂಧವಿಲ್ಲ ಎಂದ ಅವರು,ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುತ್ತದೆ.ಹಣ ಚೆಲ್ಲಿ, ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿ ಯವರು ತಿಪ್ಪರಲಾಗ ಹಾಕಿದರು ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ.ಆದರೇ ಕಾಂಗ್ರೇಸ್ ಜಾರಿಗೊಳಿಸಿದ ಬಹುತೇಕ ಯೋಜನೆಯನ್ನು ಬಿಜೆಪಿ ನಿಲ್ಲಿಸುತ್ತಿದೆ.ಇದರಿಂದ ಸಾರ್ವಜನಿಕರಿಗೆ ಕಾಂಗ್ರೇಸ್ ಅಭಿವೃದ್ಧಿ ಕಾರ್ಯದ ಬಗ್ಗೆ ಗೊತ್ತಿದೆ ಎಂದರು.
ಗ್ರಾಮ ಪಂಚಾಯತಿಯಲ್ಲಿ ಸೀಟ್ ಹರಾಜು ವಿಷಯದ ಕುರಿತು ಮಾತನಾಡಿದ ಅವರು,ಗ್ರಾಮ ಪಂಚಾಯತಿಯಲ್ಲಿ ಸೀಟ್ ಹರಾಜು ಹಾಕಬಾರದು.ಅದು ಕಾನೂನು ಬಾಹಿರ, ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು, ಇದಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿದರು.
Kshetra Samachara
11/12/2020 09:17 pm