ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

13 ಸದಸ್ಯರ ಅವಿರೋಧ ಆಯ್ಕೆಯ ದಿಟ್ಟ ನಿರ್ಧಾರ ಕೈಗೊಂಡ ಹಿರೇಹರಕುಣಿ ಗ್ರಾಪಂ

ಕುಂದಗೋಳ : ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆ ಆಗಿದ್ದೆ ತಡ ಎಲ್ಲಾ ಗ್ರಾಮಗಳಲ್ಲಿ ಸ್ಪರ್ಧಿ ಪ್ರತಿ ಸ್ಪರ್ಧಿಗಳ ಸದ್ದು ರಾಜಕೀಯ ರಣ ಕಣ ಜೋರಾಗಿದೆ.

ಆದ್ರೆ ಈ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಆ ವಾತಾವರಣ ಕಂಡು ಬರ್ತಾ ಇಲ್ಲಾ, ಕಾರಣ ಹಿರೇಹರಕುಣಿ ಗ್ರಾಮ ಪಂಚಾಯಿತಿ ಹಾಗೂ ಚಿಕ್ಕಹರಕುಣಿ ಗ್ರಾಮಗಳ 13 ಸದಸ್ಯರನ್ನು ಗ್ರಾಮದ ಹಿರಿಯರೇ ಅವಿರೋಧವಾಗಿ ಆಯ್ಕೆ ಮಾಡಲು ಚುನಾವಣಾ ಪೂರ್ವಭಾವಿ ಸಭೆ ಕರೆದು ಚರ್ಚೆ ಆರಂಭಿಸಿದ್ದಾರೆ.

ಅವಿರೋಧ ಆಯ್ಕೆ ಹೇಗೆ ? ಊರಿಗೆ ಈಗಾಗಲೇ ಸಾಮಾಜಿಕವಾಗಿ ಅತಿ ಹೆಚ್ಚು ದುಡಿದವರು, ವಿದ್ಯಾವಂತರು ರಾಜಕೀಯ ಹಿನ್ನೆಲೆ ಹೊಂದಿದವರು, ಹಾಗೂ ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಿದವರು, ಗ್ರಾಮ ಅಭಿವೃದ್ಧಿಗೆ ತಮ್ಮದೆ ಹೊಸ ಆಲೋಚನೆಗಳನ್ನ ಹೊಂದಿದವರಿಗೆ ವಿಶೇಷವಾಗಿ ಮಣೆ ಹಾಕಲಾಗುತ್ತಿದೆ.

ಒಟ್ಟಾರೆ ಗ್ರಾಮ ಪಂಚಾಯಿತಿ ಅವಿರೋಧ ಕಸರತ್ತಿಗೆ ಶ್ರಮ ಪಟ್ಟಿರುವ ಹಿರೇಹರಕುಣಿಯ ಹಿರಿಯರ ವರ್ಚಸ್ಸು ಅದೆಷ್ಟರ ಮಟ್ಟಿಗೆ ಯಶಸ್ಸಾಗುತ್ತೋ ? ಚುನಾವಣೆ ದಿನವೇ ತಿಳಿಯಲಿದೆ.

ಒಟ್ಟಾರೆ ಈ ತರಹದ ದಿಟ್ಟ ನಿರ್ಧಾರ ತಾಳಿರುವ ಹಿರೇಹರಕುಣಿ ಗ್ರಾಮವನ್ನು ಇಡೀ ತಾಲೂಕೆ ಗಮನಿಸುತ್ತಿದೆ.

Edited By : Nirmala Aralikatti
Kshetra Samachara

Kshetra Samachara

10/12/2020 10:21 am

Cinque Terre

28.23 K

Cinque Terre

2

ಸಂಬಂಧಿತ ಸುದ್ದಿ