ಧಾರವಾಡ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯ್ತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಇಂದು ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 389 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಧಾರವಾಡ ತಾಲೂಕಿನಲ್ಲಿ ಇಂದು ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಅನುಸೂಚಿತ ಜಾತಿಗೆ ಮೀಸಲಿರುವ ಸ್ಥಾನಗಳಿಗೆ 17 ನಾಮಪತ್ರಗಳು, ಅನುಸೂಚಿತ ಪಂಗಡಕ್ಕೆ ಮೀಸಲು ಇರುವ ಸ್ಥಾನಗಳಿಗೆ 13 ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 38 , ಹಿಂದುಳಿದ ‘ಬ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 13 ಮತ್ತು ಸಾಮಾನ್ಯ ವರ್ಗಕ್ಕೆ ಇರುವ ಸ್ಥಾನಗಳಿಗೆ 144 ಸೇರಿದಂತೆ ಒಟ್ಟು 225 ನಾಮಪತ್ರ ಸಲ್ಲಿಕೆಯಾಗಿವೆ.
ಅಳ್ನಾವರ ತಾಲೂಕಿನಲ್ಲಿ ಇಂದು ಅನುಸೂಚಿತ ಜಾತಿಗೆ ಮಿಸಲಿರುವ ಸ್ಥಾನಗಳಿಗೆ ಒಂದು ನಾಮಪತ್ರ, ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ ಎರಡು, ಹಿಂದುಳಿದ ‘ಬ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ ಒಂದು ನಾಮಪತ್ರ, ಸಾಮಾನ್ಯ ವರ್ಗಕ್ಕೆ ಇರುವ ಸ್ಥಾನಗಳಿಗೆ 15 ನಾಮಪತ್ರಗಳು ಸೇರಿದಂತೆ ಒಟ್ಟು 19 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಲಘಟಗಿ ತಾಲೂಕಿನಲ್ಲಿ ಇಂದು ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಅನುಸೂಚಿತ ಜಾತಿಗೆ ಮಿಸಲಿರುವ ಸ್ಥಾನಗಳಿಗೆ 21 ನಾಮಪತ್ರಗಳು, ಅನುಸೂಚಿತ ಪಂಗಡಕ್ಕೆ ಮೀಸಲು ಇರುವ ಸ್ಥಾನಗಳಿಗೆ 7 , ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 27, ಹಿಂದುಳಿದ ‘ಬ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 7 ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 83 ಸೇರಿದಂತೆ ಒಟ್ಟು 145 ನಾಮಪತ್ರಗಳು ಸಲ್ಲಿಕೆಯಾಗಿವೆ.
ಧಾರವಾಡ ತಾಲೂಕಿನ ಗ್ರಾಮ ಪಂಚಾಯ್ತಿಗಳಿಗೆ ಇಂದು 225 ನಾಮಪತ್ರಗಳು, ಕಲಘಟಗಿ ತಾಲೂಕಿನ ಗ್ರಾಮ ಪಂಚಾಯ್ತಿಗಳಿಗೆ 145 ನಾಮಪತ್ರಗಳು ಮತ್ತು ಅಳ್ನಾವರ ತಾಲೂಕಿನ ಗ್ರಾಮ ಪಂಚಾಯ್ತಿಗಳಿಗೆ 19 ನಾಮಪತ್ರಗಳು ಸೇರಿ ಒಟ್ಟು 389 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
Kshetra Samachara
09/12/2020 08:53 pm