ಹುಬ್ಬಳ್ಳಿ- 125 ವರ್ಷದ ಇತಿಹಾಸ ಹೊಂದಿದ ಕಾಂಗ್ರೆಸ್ ಪಕ್ಷಕ್ಕೆ, ತನ್ನದೆಯಾದ ಮುಂಚುಣೆ ಘಟಕ, INTUC ಇದ್ದರು ಕೂಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇತ್ರತ್ವದಲ್ಲಿ ಮುಖಂಡರೆಲ್ಲ AITUC ಗೆ ಸೇರ್ಪಡೆಯಾಗಿ ಭಾರತ ಬಂದ್ ಪ್ರತಿಭಟನೆ ಮಾಡುತ್ತಿರುವ ವಿಡಿಯೋ ಈಗ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ವಿಪರ್ಯಾಸಕ್ಕೆ ಈಡಾಗಿದ್ದಾರೆ...
ಇಬ್ಬರು ಜಿಲ್ಲಾಧ್ಯಕ್ಷರಾದ ಅನಿಲಕುಮಾ ಪಾಟೀಲ್, ಅಲ್ತಾಫ ಹಳ್ಳುರ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರೆಗಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸ್ಮಾಲ್ ಜೈನ, ರಾಜಶೇಖರ ಮೆನಸಿನಕಾಯಿ, ಪಾಲಿಕೆ ಸದಸ್ಯ ಮೂಹನ ಹಿರೇಮನಿ, ಅಬ್ದುಲ ಗಣಿ ಹಲಾವರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು ಕೂಡ, ಬೇರೆ ಬ್ಯಾನರದಲ್ಲಿ ಪ್ರತಿಭಟನೆ ಮಾಡುತ್ತಿರುವುದು ಸಾರ್ವಜನಿಕರಿಗೆ ನಗೆಗೆ ಈಡಾಗಿದ್ದಾರೆ.
ಅತ್ತ ಬೆಂಗಳೂರಿನಲ್ಲಿ ನಿನ್ನೆ ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಪಕ್ಷವನ್ನು ಭೂತ ಮಟ್ಟದಿಂದ ಸಂಘಟನೆಯ ಕಾರ್ಯರೂಪಕ್ಕೆ ಪಡಿಸುತ್ತಿದ್ದಾರೆ. ಇತ್ತ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಬೇರೆ ಪಕ್ಷದ ಬ್ಯಾನರ್ ಅಡಿಯಲ್ಲಿ ನಿಂತುಕೊಂಡು ಪ್ರತಿಭಟನೆ ಮಾಡಿ, ಅಪಹಾಸ್ಯಕ್ಕೆ ತುತ್ತಾಗಿದ್ದಾರೆ. ಇವರ ಕಡೆ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ ಶಿವಕುಮಾರ ಗಮನ ಹರಿಸಬೇಕಾಗಿದೆ.
Kshetra Samachara
08/12/2020 07:49 pm