ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸಚಿವ ಸಂಪುಟ ವಿಸ್ತರಣೆ ಯಾವಾಗ,ಯಾರಿಗೆ ಯಾವ ಸ್ಥಾನದ ಬಗ್ಗೆ ಹೀಗಂದರು: ಸಚಿವ ಭೈರತಿ ಬಸವರಾಜ

ಧಾರವಾಡ : ಸಚಿವ ಸಂಪುಟ ವಿಸ್ತರಣೆ ಯಾವಾಗ, ಯಾರಿಗೆ ಯಾವ ಸ್ಥಾನ? ಎಲ್ಲವೂ ಇಷ್ಟರಲ್ಲೇ ಹೊರಬೀಳುತ್ತೆ ಎಂದು ಸಚಿವ ಭೈರತಿ ಬಸವರಾಜ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿದ್ದರಾಮಯ್ಯ ಬಗ್ಗೆ ಎಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ನಾನು ಕಾಂಗ್ರೆಸ್-ಜೆಡಿಎಸ್‌ನಲ್ಲಿ ಇಲ್ಲ,ಆ ಬಗ್ಗೆ ಸಿದ್ದರಾಮಯ್ಯನವರೇ ಹೇಳಬೇಕು.

ನಾವು ಏನಿದ್ದರೂ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ,ನಾವು ಎಲ್ಲಿಯೂ ಗೊಂದಲ‌ ನಿರ್ಮಿಸಿಕೊಳ್ಳುತ್ತಿಲ್ಲ,ಅವರವರ ಕಾಲು ಎಳೆಯುವ ಕೆಲಸ ನಾವು ಮಾಡುವುದಿಲ್ಲ,ಬೆಳಗಾವಿ ಕಾರ್ಯಕಾರಣಿ ಸಭೆಯಲ್ಲಿ ದೇಶ ಮತ್ತು ರಾಜ್ಯದ ಬಗ್ಗೆ ಚಿಂತನೆ ಆಗುತ್ತಿದೆ.ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು,ಅದು ಯಾವಾಗ ಬೇಕಾದಾಗ ತೀರ್ಮಾನ ಆಗಲಿದೆ. 3-4 ಜನರಿಗೆ ಸಚಿವರನ್ನು ಮಾಡುವುದು ಅವರ ಮನಸ್ಸಿನಲ್ಲಿದೆ ಅವರು ಕೊಟ್ಟ ಮಾತು ಯಾವತ್ತೂ ತಪ್ಪುವುದಿಲ್ಲ,ಹಾಗೇ ಯಾವುದೇ ಅಸಮಾಧಾನ ಇಲ್ಲ ಎಂದು ಅವರು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

05/12/2020 07:56 pm

Cinque Terre

31.32 K

Cinque Terre

1

ಸಂಬಂಧಿತ ಸುದ್ದಿ