ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನ್ಯಾ.ಎ ಜೆ ಸದಾಶಿವ ಆಯೋಗದ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಮನವಿ

ಕಲಘಟಗಿ:ನ್ಯಾ.ಎ ಜೆ ಸದಾಶಿವ ಆಯೋಗದ ವರದಿ ಸೇರಿದಂತೆ ನ್ಯಾ.ಹೆಚ್ ಎನ್ ನಾಗಮೋಹನದಾಸ್, ನ್ಯಾ.ಕಾಂತರಾಜ್ ಆಯೋಗಗಳ ವರದಿಗಳನ್ನು ಜಾರಿಗೆ ತರುವಂತೆ ಶಾಸಕ ಸಿ ಎಂ ನಿಂಬಣ್ಣವರಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಮನವಿಯಲ್ಲಿ‌ ಡಿಸೆಂಬರ್ ೭ ರಂದು ನಡೆಯುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ತರಲು ರಚಿಸಿರುವ ಆಯೋಗಗಳ ವರದಿಯನ್ನು ಅಂಗೀಕರಿಸಿ ಜಾರಿಗೆ ತರುವಂತೆ ಒತ್ತಾಯಿಸಲಾಯಿತುಮನವಿ ಸ್ವೀಕರಿಸಿ‌ ಮಾತನಾಡಿದ ಶಾಸಕ‌ ಸಿ ಎಂ‌ ನಿಂಬಣ್ಣವರ, ಅಧಿವೇಶನದಲ್ಲಿ ಈ‌‌ ಕುರಿತು ಧ್ವನಿ ಎತ್ತಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಂಜುನಾಥ ಮಾದರ,ಯಲ್ಲಪ್ಪ‌ ಕಟ್ಟಿಮನಿ,ಶಶಿಕುಮಾರ ಕಟ್ಟಿಮನಿ,ಸತೀಶ್ ದೊಡ್ಡಮನಿ,ಚಂದ್ರು ‌ಮಾದರ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

05/12/2020 06:12 pm

Cinque Terre

21.7 K

Cinque Terre

0

ಸಂಬಂಧಿತ ಸುದ್ದಿ