ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉ.ಕ ಭಾಗದ ಕೈಗಾರಿಕರಣಕ್ಕೆ ಶುಕ್ರದಸೆ: ಏಕಸ್ ಕಂಪನಿ ಸ್ಥಾಪನೆಗೆ ಗ್ರೀನ್ ಸಿಗ್ನಲ್, 30,000 ಉದ್ಯೋಗ ಸೃಷ್ಟಿ

ಹುಬ್ಬಳ್ಳಿ: ಅದು ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲು. ಈ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿತ್ತು. ಆ ಎಲ್ಲ ಪ್ರಯತ್ನಗಳು ಈಗ ಫಲ ನೀಡಿದಂತೆ ಕಾಣುತ್ತಿವೆ. ಬಹುದಿನಗಳ ಕನಸು ಈಗ ನನಸಾಗುತ್ತಿದೆ. ಅಷ್ಟಕ್ಕೂ ಅದು ಯಾವ..? ಪ್ರಯತ್ನ ಅಲ್ಲಿ ನಡೆದಿದ್ದಾರೂ ಏನು..? ಅಂತೀರಾ ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್...

ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾಭಿವೃದ್ಧಿ ಮಾಡುವ ಸದುದ್ದೇಶದಿಂದ ವಾಣಿಜ್ಯನಗರಿ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು‌. ಸಮಾವೇಶದ ನಂತರ ಈ ಭಾಗದ ಕೈಗಾರಿಕಾ ಸ್ಥಾಪನೆಗೆ ಶುಕ್ರದಸೆ ಪ್ರಾರಂಭವಾಗಿದೆ. ಬೃಹತ್ ಮಟ್ಟದ ಖಾಸಗಿ ಕಂಪನಿಗಳು ದೊಡ್ಡಮಟ್ಟದ ಬಂಡವಾಳ ಹೂಡಲು ಮುಂದೆ ಬಂದಿವೆ. ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಧನಾತ್ಮಕ ಪ್ರತಿಕ್ರಿಯೆ ಬಂದಿದ್ದು, ಇನ್ವೆಸ್ಟ್ ಕರ್ನಾಟಕದಿಂದ ದೇಶದ ಮೂಲೆ ಮೂಲೆಯಿಂದ ಕಂಪನಿಗಳು ಧಾರವಾಡ ಜಿಲ್ಲೆಗೆ ಆಗಮಿಸುತ್ತಿವೆ. ಏಕಸ್ ಕಂಪನಿ ಧಾರವಾಡದ ಇಟ್ಟಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಟಿವಿ, ಫ್ರಿಟ್ಜ್ ಬಿಡಿಭಾಗಗಳನ್ನು ತಯಾರಿಸುವ ಘಟಕಗಳನ್ನ ಸ್ಥಾಪನೆ ಮಾಡಲು ಮುಂದಾಗಿದೆ.

ಪಾಸ್ಟ್ ಮೂವಿಂಗ್ ಕಂಜುಮರ್ ಗೂಡ್ಸ್(ಎಫ್ ಎಂ ಸಿಜಿ-ವೇಗವಾಗಿ ಮಾರಾಟವಾಗುವ ಗ್ರಾಹಕರ ವಸ್ತುಗಳು)ಕ್ಲಸ್ಟರ್ ಸ್ಥಾಪನೆ ಕುರಿತು ಉಲ್ಲಾಸ ಕಾಮತ್ ನೇತೃತ್ವದಲ್ಲಿ ವರದಿಯನ್ನು ಈಗಾಗಲೇ ಸಲ್ಲಿಸಿದೆ. ಈಗ ಏಕಸ್ ಕಂಪನಿ ಕೂಡ ಗೃಹ ಬಳಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದಿಸುವ ಘಟಕ ಸ್ಥಾಪಿಸುವ ಕುರಿತು ಪ್ರಸ್ಥಾವನೆ ಸಲ್ಲಿಸಿದೆ. ಇನ್ನೂ ಈ ಕುರಿತು ರಾಜ್ಯ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಅಗತ್ಯ ಭೂಮಿ ಮಂಜೂರಾತಿಯನ್ನು ಪಡೆದುಕೊಂಡಿದೆ. ಧಾರವಾಡ ಜಿಲ್ಲೆಯ ಇಟಿಗಟ್ಟಿಯ ಬಳಿಯಲ್ಲಿ 400 ಏಕರೆ ಭೂಮಿಯನ್ನು ಏಕಸ್ ಕಂಪನಿಗೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಮೊದಲ ಹಂತದ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡಿವೆ. ಈಗಾಗಲೇ ಬೆಳಗಾವಿ ಬಳಿ ಏರೋಸ್ಪೇಸ್ ಎಸ್ಇಜೆಡ್ ಘಟಕ ಸ್ಥಾಪನೆ ಮಾಡಿದ್ದು, ಈಗ ಧಾರವಾಡದಲ್ಲಿ ಸುಮಾರು 3500 ಕೋಟಿ ಬಂಡವಾಳ ಹೂಡಲು ಮುಂದಾಗಿದೆ. ಅಲ್ಲದೇ 30 ಸಾವಿರ ಉದ್ಯೋಗ ಸೃಷ್ಟಿಯ ಭರವಸೆ ನೀಡಿದೆ..

ಫ್ರಿಟ್ಜ್, ವಾಸಿಂಗ್ ಮಷಿನ್, ಎಸಿ, ಹಿಟರ್, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಇನ್ನೂ ಧಾರವಾಡದಲ್ಲಿ ಉತ್ಪಾದನೆಗೊಳ್ಳುತ್ತಿರುವುದು ವಿಶೇಷವಾಗಿದೆ. ಇನ್ನೂ ಮಮ್ಮಿಗಟ್ಟಿ ಬಳಿ ಕೂಡ ಎಫ್ಎಂಸಿಜಿ ಘಟಕ ಸ್ಥಾಪನೆಗೆ ಸ್ಥಳ ವೀಕ್ಷಣೆ ಕಾರ್ಯ ನಡೆದಿದೆ. ಕೆಲವು ದಿನಗಳಲ್ಲಿ ಅದು ಕೂಡ ಕಾರ್ಯಾರಂಭ ಮಾಡಲಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಈ ಯುವಕರಿಗೆ ಉದ್ಯೋಗಗಳು ಸಿಗುವ ಆಶಾಭಾವನೆ‌ ಹೆಚ್ಚಿಸಿದೆ.

Edited By : Nagesh Gaonkar
Kshetra Samachara

Kshetra Samachara

04/12/2020 01:18 pm

Cinque Terre

58.23 K

Cinque Terre

13

ಸಂಬಂಧಿತ ಸುದ್ದಿ