ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಆಡಳಿತ ಪಕ್ಷಕ್ಕೆ ಪ್ರಬಲವಾದ ವಿರೋಧ ಪಕ್ಷವಿರಬೇಕು : ಹಿಂಗ ಅಂದವರು ಯಾರು?

ಧಾರವಾಡ : ಪ್ರಜಾಪ್ರಭುತ್ವದಲ್ಲಿ ಯಾವುದೇ ಚುನಾವಣೆಗಳು ನಿಲ್ಲಬಾರದು,ಬಿಹಾರದಲ್ಲಿ ಚುನಾವಣೆ ಆಗಿದೆ, ಗ್ರಾಮ ಪಂಚಾಯತ್ ಚುನಾವಣೆಯೂ ಆಗಬೇಕು.

ಎಲ್ಲ ರಾಜಕೀಯ ಸಭೆಗಳಿಗೂ ಪರವಾನಗಿ ನೀಡಬೇಕು,ಎಲ್ಲವನ್ನೂ ಹತ್ತಿಕ್ಕಿ, ಹೆದರಿಸುವ ಕೆಲಸಕ್ಕೆ ನಾನು ವಿರೋಧಿಸುತ್ತೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎ.ಪಿ ನಾಡಗೌಡ ಹೇಳಿದರು.

ನಗರದಲ್ಲಿಂದು ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷಕ್ಕೆ ವಿರೋಧ ಪಕ್ಷ ಬೇಕು, ವಿರೋಧ ಪಕ್ಷವನ್ನೇ ಮುಗಿಸಲು ಯತ್ನ ನಡೆಯುತ್ತಿದೆ.ಅಂತಹದಕ್ಕೆ ನಮ್ಮ ಬೆಂಬಲ ಇಲ್ಲ,

ನಾಲ್ಕು ಅಂಗಗಳು ತಮ್ಮ ತಮ್ಮ ಕೆಲಸಗಳನ್ನು ಸರಿಯಾಗಿ ಮಾಡದೇ ಇದ್ದರೆ, ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತದೆ ಎಂದು ಅವರು ಹೇಳಿದರು.

Edited By : Manjunath H D
Kshetra Samachara

Kshetra Samachara

30/11/2020 02:15 pm

Cinque Terre

15.78 K

Cinque Terre

2

ಸಂಬಂಧಿತ ಸುದ್ದಿ