ಕಲಘಟಗಿ:ಮರಾಠಾ ಜನಾಂಗವನ್ನು 2 ಎ ವರ್ಗಕ್ಕೆ ಸೇರಿಸುವಂತೆ ತಾಲೂಕಾ ಮರಾಠಾ ಸಮಾಜದ ಮುಖಂಡರು ಒತ್ತಾಯಿಸಿದರು.
ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮುಖಂಡರಾದ ಫಕ್ಕಿರೇಶ ನೆಸರೇಕರ, ಮಹಾಂತೇಶ ತಹಶೀಲ್ದಾರ,ಸದಾನಂದ ಚಿಂತಾಮಣಿ,ಮುಕುಂದ ಅಂಚಟಗೇರಿ ಮಾತನಾಡಿ,ಶೈಕ್ಷಣಿಕ,ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದ ಜನಾಂಗದ ಅಭಿವೃದ್ಧಿಗೆ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರವುದು ಪೂರಕವಾಗಲಿದೆ.ಅದೇ ತೆರನಾಗಿ ಉದ್ಯೋಗ,ಶಿಕ್ಷಣ ಸೌಲಭ್ಯಕ್ಕಾಗಿ ಮರಾಠ ಜನಾಂಗ ಕಳೆದ ಹದಿನೈದು ವರ್ಷಗಳಿಂದ 3 ಬಿ ವರ್ಗದಿಂದ 2 ಎ ವರ್ಗ ಕ್ಕೆ ಸೇರ್ಪಡೆ ಗೊಳಿಸಲು ಆಗ್ರಹಿಸಲಾಗುತ್ತಿದ್ದು,ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ಆಡಳಿತಾವಧಿಯಲ್ಲಿ ಈ ಕೆಲಸ ಆಗಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಲ್ಲಾರಿ ಶಿಂಧೆ,ತಾನಾಜಿ ಮೊತೇನವರ,ನಿಜಗುಣಿ ಕ್ಷೀರಸಾಗರ,ಗಿರೀಶ ಸೂರ್ಯವಂಶಿ,ವಿಜಯ ಮುರಾರಿ ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು.
Kshetra Samachara
28/11/2020 09:34 pm