ಧಾರವಾಡ: ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಜನ್ಮದಿನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಧಾರವಾಡ ನಗರ ಘಟಕ 71ರ ಅಧ್ಯಕ್ಷರ ಶ್ರೀ ಸುನೀಲ ಮೋರೆ ಅವರ ನೇತೃತ್ವದಲ್ಲಿ ನಗರದ ಗಾಂಧಿ ಚೌಕ, ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಮಹಾಭಿಷೇಕ ಮಾಡಿಸಿ ಸಿಹಿ ವಿತರಿಸಿ ಕೇಂದ್ರ ಸಚಿವರ ಜನ್ಮದಿನ ಆಚರಣೆ ಮಾಡಿದರು.
ಈ ಸಂಧರ್ಭದಲ್ಲಿ ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೋಟ್ಯಾನ್, ಹರೀಶ ಬಿಜಾಪುರ, ಪಕ್ಷದ ಹಿರಿಯರಾದ ಈರಣ್ಣ ಹಪ್ಪಳಿ, ಟಿ.ಎಸ್ ಪಾಟೀಲ, ಸಿದ್ದು ಕಲ್ಯಾಣಶೆಟ್ಟಿ, ಶಂಕರ ಶೇಳಕೆ ಯುವಮೋರ್ಚಾ ಅಧ್ಯಕ್ಷ ಶಕ್ತಿ ಹಿರೇಮಠ,ಸೇರಿದಂತೆ ಇತರರು ಇದ್ದರು.
Kshetra Samachara
27/11/2020 02:32 pm