ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ನಿವಾಸಕ್ಕೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭೇಟಿ ನೀಡಿ ವಿನಯ್ ಅವರ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಅವರು ಈ ಪ್ರಕರಣದಲ್ಲಿ ಗೆದ್ದು ಬರುತ್ತಾರೆ. ಅವರೊಂದಿಗೆ ಸಿದ್ದರಾಮಯ್ಯನವರಾದಿಯಾಗಿ ಇಡೀ ಕಾಂಗ್ರೆಸ್ ಪಕ್ಷದ ಕಟ್ಟಕಡೆಯ ಕಾರ್ಯಕರ್ತ ಕೂಡ ಇದ್ದಾನೆ. ಇದು ಬಿಜೆಪಿಯ ತಂತ್ರ. ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಬಿಜೆಪಿಯವರ ಕೈಯಲ್ಲಿ ಅಧಿಕಾರ ಇದೆ. ಆ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸತ್ಯ ಮೇವ ಜಯತೇ ಸತ್ಯ ಯಾವಾಗಲೂ ಜಯಶಾಲಿಯಾಗುತ್ತದೆ ಎಂದರು.
Kshetra Samachara
13/11/2020 03:09 pm