ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಅಮಾಯಕ

ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಒಬ್ಬ ಅಮಾಯಕರು. ಅವರನ್ನು ರಾಜಕೀಯ ಪ್ರೇರಿತವಾಗಿ ಬಂಧಿಸಲಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು .

ವಿನಯ್ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಧೈರ್ಯ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿನಯ್ ನಮ್ಮ ಕುಟುಂಬದ ಸದಸ್ಯರೆಂಬ ಭಾವನೆ ನಮ್ಮಲ್ಲಿದೆ. ಬಹಳ ವರ್ಷಗಳಿಂದ ವಿನಯ್ ಅವರು ನನಗೆ ಪರಿಚಿತರು. ಅವರೊಬ್ಬ ಸೀದಾ ಸಾದಾ ವ್ಯಕ್ತಿ. ಬಿಜೆಪಿ ಪಕ್ಷವು ಸಿಬಿಐ, ಐಟಿ, ಇಡಿ ಹಾಗೂ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಪಾಟೀಲ ಆರೋಪಿಸಿದರು.

ಇನ್ನು ಬಾಗಲಕೋಟೆಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಅವರು, ಮಹಿಳೆಯನ್ನು ಎಳೆದಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಮಹಿಳೆಯರ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವುದಾಗಿ ಹೇಳುತ್ತದೆ. ಆದರೆ, ಸಿದ್ದು ಸವದಿ ಅವರ ಈ ಪೈಶಾಚಿಕ ಕೃತ್ಯದಿಂದ ಬಿಜೆಪಿ ಮಹಿಳೆಯರ ಮೇಲೆ ಎಷ್ಟೊಂದು ಗೌರವ ಇಟ್ಟುಕೊಂಡಿದೆ ಎಂಬುದು ಗೊತ್ತಾಗುತ್ತದೆ ಎಂದರು.

Edited By : Nagesh Gaonkar
Kshetra Samachara

Kshetra Samachara

12/11/2020 04:37 pm

Cinque Terre

45.52 K

Cinque Terre

7

ಸಂಬಂಧಿತ ಸುದ್ದಿ