ಹುಬ್ಬಳ್ಳಿ- ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆರ್ ಆರ್ ನಗರ, ಶಿರಾ ಮತ್ತು ಬಿಹಾರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ, ನಗರದಲ್ಲಿ ಇಂದು ಜಿಲ್ಲಾ ಬಿಜೆಪಿ ಮಹಾನಗರ ಘಟಕದ ವತಿಯಿಂದ
ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪರಸ್ಪರ ಸಿಹಿ ಹಂಚಿ, ಸಿಹಿ ವಿನಿಮಯ ಮಾಡಿಕೊಂಡು, ಗೆಲುವಿನ ನಗೆಯೊಂದಿಗೆ ವಿಜಯದ ಸಂಕೇತ ಪ್ರದರ್ಶಿಸುತ್ತಾ ಹರುಷ ವ್ಯಕ್ತಪಡಿಸಿದರು. ವಿಜಯೋತ್ಸವದಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟರ್ ಕ್ಷೇತ್ರದ ಅಧ್ಯಕ್ಷ ತಿಪ್ಪಣ್ಣ ಮಜ್ಜಿಗೆ, ಮುಖಂಡರಾದ ದತ್ತಮೂರ್ತಿ, ಜಿಲ್ಲಾ ವಕ್ತಾರ ರವಿ ನಾಯಕ, ಮತ್ತಿತರರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು....
Kshetra Samachara
11/11/2020 09:43 pm