ಹುಬ್ಬಳ್ಳಿ- ಅಖಿಲ ಕರ್ನಾಟಕ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣೆ ನಾಮಪತ್ರ ಸಲ್ಲಿಸುವ ಸಲುವಾಗಿ, ನಗರದ ಹೊಸೂರು ರಸ್ತೆಯಲ್ಲಿರುವ ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಲ್ನಡಿಗೆ ಮೂಲಕ ನಗರದ ಪ್ರಮುಖ ಬೀದಿಗಳ ಮೂಲಕ ತಹಶೀಲ್ದಾರ ಕಛೇರ ಎದುರು ನಾಮಪತ್ರ ಸಲ್ಲಿಸಲಾಯ್ತು.
ಈ ವೇಳೆ ಅ.ಕ.ಸಾ.ನೌ.ಪ. ಪ್ರದಾನ ಕಾರ್ಯದರ್ಶಿ ಡಾ.ಜಿ.ಪ್ರಕಾಶ ಮೂರ್ತಿ ಮಾತನಾಡಿ 1967 ರಲ್ಲಿ ಸ್ಥಾಪನೆಯಾದ ಈ ಸಹಕಾರಿ ಪತ್ತಿನ ಮಂಡಳಿಯನ್ನು ಪದಾಧಿಕಾರಿಗಳೇ ಆಡಳಿತ ನೆಡೆಸಿಕೊಂಡು ಬಂದಿದ್ದು, ಸಂಘವು ಕಡಿಮೆ ಬಡ್ಡಿ ದರದಲ್ಲಿ ನೌಕರಿಗೆ ಸಾಲ ನೀಡುತ್ತಿದೆ. ಮತ್ತು ಈ ಬಾರಿ ಒಟ್ಟು 19 ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಎಲ್ಲ ಅಭ್ಯರ್ಥಿಗಳು ಆಯ್ಕೆಯಾಗುವ ಭರವೆಸೆ ನೀಡಿದರು.....
Kshetra Samachara
06/11/2020 06:45 pm