ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ರಾಜಕೀಯ ಕುತಂತ್ರದಿಂದ ಬಂಧನ ಮಾಡಲಾಗಿದೆ. ನಾಳೆ ಅವರ ಹುಟ್ಟು ಹಬ್ಬದ ಅಂಗವಾಗಿ ಧಾರವಾಡದ ಅನೇಕ ಕಡೆಗಳಲ್ಲಿ ಬ್ಯಾನರ್ ಗಳನ್ನು ಹಾಕಲಾಗಿತ್ತು. ಅವುಗಳನ್ನೂ ರಾಜಕೀಯ ಕುತಂತ್ರದಿಂದ ತೆರವುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಆನಂದ ಸಿಂಗನಾಥ್ ಆರೋಪಿಸಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ವಿನಯ್ ಅವರು ರಾಜಕೀಯದಲ್ಲಿ ಅತೀ ವೇಗದಲ್ಲಿ ಬೆಳೆಯುತ್ತಿದ್ದರು. ಅವರನ್ನು ಹತ್ತಿಕ್ಕುವ ದೃಷ್ಟಿಯಿಂದ ಆಡಳಿತ ಪಕ್ಷಗಳು ಸಿಬಿಐ ಮೂಲಕ ಅವರನ್ನು ಬಂಧಿಸಿದೆ. ಅದೇ ರೀತಿ ಮಹಾನಗರ ಪಾಲಿಕೆ ಆಡಳಿತ ಪಕ್ಷಗಳ ಮಾತು ಕೇಳಿ ಬ್ಯಾನರ್ ಗಳನ್ನು ತೆರವುಗೊಳಿಸಿದೆ ಎಂದು ಆರೋಪಿಸಿದರು.
Kshetra Samachara
06/11/2020 02:57 pm