ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ನಾಳೆ ಎಎಪಿಯಿಂದ ಪ್ರತಿಭಟನೆ

ಧಾರವಾಡ : ಕೆಐಎಡಿಬಿ ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ನಿವೇಶನಗಳ ಬೇಕಾಬಿಟ್ಟಿ ದರ ಹೆಚ್ಚಳ ಮತ್ತು ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ವಿರೋಧಿ ನೀತಿ ಖಂಡಿಸಿ ನಾಳೆ ಬೆಳಿಗ್ಗೆ 11 ರಿಂದ ನಗರದ ಲಕ್ಕಮ್ಮನಹಳ್ಳಿಯಲ್ಲಿನ ಕೆಐಎಡಿಬಿ ಕಚೇರಿ ಎದುರು ಧಾರವಾಡ ಅಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಲಾಗುವುದೆಂದು ಜಿಲ್ಲಾಧ್ಯಕ್ಷರಾದ ಸಂತೋಷ ನರಗುಂದ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಧ್ವನಿಯಾಗಿ ಆಮ್ ಆದ್ಮಿ ಪಕ್ಷ ಗಾಮನಗಟ್ಟಿ ಗ್ರೀನ್ ಟೆಕ್ ಪಾರ್ಕ್ ಉಳಿಸಿ ( ಸೇವ್ ಗಾಮನಗಟ್ಟಿ ಗ್ರೀನ್ ಟೆಕ್ ಪಾರ್ಕ್ ) ಎಂಬ ಶೀರ್ಷಿಕೆಯಲ್ಲಿ ಹೋರಾಟ ಮುಂದುವರೆಸಿದೆ. ಈ ಒಂದು ಹೋರಾಟಕ್ಕೆ ಬೆಂಬಲ ಕೋರಿ ಆಮ್ ಆದ್ಮಿ ಪಕ್ಷದ ಅನೇಕ ಮುಖಂಡರ ತಂಡಗಳು ಕೈಗಾರಿಕಾ ಪ್ರದೇಶಗಳಿಗೆ ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಕೋರಿವೆ.ಬೇಲೂರು ಇಂಡಸ್ಟ್ರಿಯಲ್ ಅಸೋಸಿಯೇಷನ್ ಸೇರಿದಂತೆ ವಿವಿಧ ಕೈಗಾರಿಕಾ ಸಂಘ - ಸಂಸ್ಥೆಗಳ ಮುಖ್ಯಸ್ಥರಿಗೆ ಭೇಟಿ ಆಗಿ ಹೋರಾಟದ ಕರಪತ್ರ ನೀಡಿ ಅವರ ಬೆಂಬಲ ಕೋರಿದ್ದಾರೆ. ಇದಕ್ಕೆ ಕೈಗಾರಿಕಾ ಸಂಘಗಳು ತಮ್ಮ ಬೆಂಬಲ ಸೂಚಿಸುವ ಭರವಸೆ ನೀಡಿವೆ ಎಂದರು.

Edited By : Manjunath H D
Kshetra Samachara

Kshetra Samachara

06/11/2020 12:39 pm

Cinque Terre

26.26 K

Cinque Terre

1

ಸಂಬಂಧಿತ ಸುದ್ದಿ