ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ವಶಕ್ಕೆ ಪಡೆದಿರುವುದು ರಾಜಕೀಯ ಪ್ರೇರಿತ ಎಂದು ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ದೂರಿದರು.
ಇದೊಂದು ಷಡ್ಯಂತ್ರದಿಂದ ನಡೆಯುತ್ತಿದೆ,ಕಳೆದ ಒಂದುವರೆ ವರ್ಷದಿಂದ ತನಿಖೆ ನಡೆಸುತ್ತಿದ್ದಾರೆ.ಇಂದು ಅದಕ್ಕೆ ಎಲ್ಲದಕ್ಕೂ ಉತ್ತರ ಸಿಗಲ್ಲಿ,ವಿನಯ ಕುಲಕರ್ಣಿ ಅವರಿಗೆ ಕೊಲೆ ಮಾಡುವ ಜಾಯಮಾನವಿಲ್ಲಾ ಅವರು ಅಮಾಯಕರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಮಾತನಾಡಿದ್ದಕ್ಕೆ ಇದು ಸೇಡಿ ರಾಜಕಾರಣ ಮಾಡಲಾಗುತ್ತಿದೆ. ಸಿಬಿಐ ತನಿಖೆಗೆ ಅಡ್ಡಿ ಪಡೆಸುವುದಿಲ್ಲ. ಬೇಕಾದರೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರನ್ನು ಅವರು ಬಂಧಿಸಲಿ. ಎಲ್ಲಾ ವಿಚಾರಣೆಯನ್ನು ಒಮ್ಮೆಲೇ ಮಾಡಿ ಮುಗಿಸಲಿ.ಇವತ್ತು ಏನಾಗುವುದು ಆಗಲಿ ನೋಡೊಣ ಅರೆಸ್ಟ ಮಾಡುವುದಾದರೆ ಮಾಡಲಿ ನೋಡೊಣ ಇದರಲ್ಲಿ ಕಾನೂನು ಜಯ ಸಿಕ್ಕೆ ಸಿಗುತ್ತದೆ.ಬಂಧನದ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ನಾಯಕರ ಜೊತೆಗೆ ಕೂಡಿಕೊಂಡು ಪ್ರತಿಭಟನೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
Kshetra Samachara
05/11/2020 09:41 am