ಕುಂದಗೋಳ : ರೈತರ ಅನುಕೂಲಕ್ಕೆ ಸರ್ಕಾರ ನೀಡಿದ ಸೌಲಭ್ಯ ಅರ್ಹ ರೈತರ ಪಾಲಾಗಿದೆ. ಎಲ್ಲ ರೈತರು ಸಹ ಈ ಸೌಲಭ್ಯ ಪಡೆಯಿರಿ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಕುಂದಗೋಳ ಮತಕ್ಷೇತ್ರದ ವಿವಿಧ ಗ್ರಾಮಗಳ ರೈತರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಅಡಿಯಲ್ಲಿ 2019-20 ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಿದ ಪಲಾನುಭವಿಗಳಿಗೆ ಗಂಗಾ ಕಲ್ಯಾಣ ಸಾಮಗ್ರಿಗಳನ್ನು ಪ್ರವಾಸಿ ಮಂದಿರದ ಆವರಣದಲ್ಲಿ ವಿತರಿಸಿ ಮಾತನಾಡಿದರು.
ಈ ವೇಳೆ ನಿಗಮದ ವ್ಯವಸ್ಥಾಪಕ ಎಸ್.ವಿ ದಿವಾಕರ ಮಾತನಾಡಿ ಶಾಸಕರ ಪರಿಶ್ರಮದ ಫಲವಾಗಿ ಕುಂದಗೋಳ ತಾಲೂಕಿನ ಫಲಾನುಭವಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸೌಲಭ್ಯ ನೀಡಲಾಗಿದೆ ಎಂದರು.
ಬಳಿಕ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ನಿಗಮದ ವ್ಯವಸ್ಥಾಪಕ ಎಸ್.ವಿ.ದಿವಾಕರ ಗಂಗಾ ಕಲ್ಯಾಣ ಸಾಮಗ್ರಿ ವಿತರಣೆ ಮಾಡಿ ರೈತರ ಸಂತೋಷಕ್ಕೆ ಕಾರಣ ಆದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುರೇಶ ಗಂಗಾಯಿ, ಕಾಂಗ್ರೆಸ್ ಕಾರ್ಯಕರ್ತರು ಫಲಾನುಭವಿ ರೈತರು ಉಪಸ್ಥಿತರಿದ್ದರು.
Kshetra Samachara
26/09/2022 04:41 pm