ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಾಳಾದ ಬೆಳೆ ಹಿಡಿದು ತಹಶೀಲ್ದಾರ ಕಚೇರಿಗೆ ಪರಿಹಾರಕ್ಕೆ ಬಂದ ಅನ್ನದಾತರು

ಕುಂದಗೋಳ : ಅತಿವೃಷ್ಟಿ ಪರಿಣಾಮ ಕುಂದಗೋಳ ತಾಲೂಕಿನ ಎಲ್ಲೇಡೆ ರೈತರ ಬೆಳೆ ಹಾಳಾಗಿದ್ದು ಅದರಲ್ಲೂ ವಿಶೇಷವಾಗಿ ವಾಣಿಜ್ಯ ಬೆಳೆ ಮೆಣಸಿನಕಾಯಿ ಗಿಡಗಳು ಅತಿವೃಷ್ಟಿಗೆ ಸಿಲುಕಿದ ಸುಟ್ಟು ಕರಲಾದಂತೆ ಭಾಸವಾಗಿವೆ.

ಈ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ತರ್ಲಘಟ್ಟ, ಬು.ಕೊಪ್ಪ, ನೆಲಗುಡ್ಡ ಗ್ರಾಮಗಳ ರೈತ ಸಂಘದ ರೈತರು ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ಕೈ ಯಲ್ಲಿ ಅತಿವೃಷ್ಟಿಗೆ ಹಾಳಾದ ಮೆಣಸಿನಕಾಯಿ ಗಿಡಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಾ ಬಂದು ಅತಿವೃಷ್ಟಿಗೆ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ, ಬೆಳೆ ಹಾನಿ, ರೈತರು ಸಾಲ ಮನ್ನಾ, ಅತಿವೃಷ್ಟಿಗೆ ಹಾನಿಯಾದ ರೈತರ ಮನೆಗಳಿಗೆ ಪರಿಹಾರದ ಜೊತೆ ಕುಂದಗೋಳ ತಾಲೂಕಿನ ಅಧಿಕಾರಿಗಳು ಬೆಳೆ ಆನೆವಾರಿ ಸಮೀಕ್ಷೆ ಸರಿಯಾಗಿ ಕೈಗೊಳ್ಳುವಂತೆ ತಹಶೀಲ್ದಾರಗೆ ಮನವಿ ಸಲ್ಲಿಸಿದರು.

ತಹಶೀಲ್ದಾರ ಕಚೇರಿಯಲ್ಲಿ ಅತಿವೃಷ್ಟಿಗೆ ಒಣಗಿದ ಮೆಣಸಿನಕಾಯಿ, ಶೇಂಗಾ, ಹತ್ತಿ ಬೆಳೆಗಳನ್ನು ಹಿಡಿದು ರೈತರು ನ್ಯಾಯ ಕೇಳಿದ್ದು ಅನ್ನದಾತನ ಮರುಗವಿಕೆಯನ್ನು ತೋರಿಸಿತು.

Edited By : Shivu K
Kshetra Samachara

Kshetra Samachara

06/12/2021 03:31 pm

Cinque Terre

25.96 K

Cinque Terre

1

ಸಂಬಂಧಿತ ಸುದ್ದಿ