ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ದೆಹಲಿವರೆಗೆ ಪಾದಯಾತ್ರೆ

ನವಲಗುಂದ : ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಬಾಗಲಕೋಟೆಯ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಕಲಕುಟಗರ ಎಂಬುವವರು ಚಾಮರಾಜನಗರದಿಂದ ದೆಹಲಿವರೆಗೆ ಪಾದಯಾತ್ರೆ ಕೈಗೊಂಡಿದ್ದು, ನವಲಗುಂದದಲ್ಲಿ ಇದಕ್ಕೆ ರೈತರಿಂದ ಬೆಂಬಲ ಸೂಚಿಸಲಾಯಿತು.

ನಗರದ ರೈತಭವನದಲ್ಲಿ ಹುತಾತ್ಮರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವಂತಹ ರೈತರಿಗೆ ಜಯವಾಗಬೇಕೆಂದು ಅವರಿಗೆ ಬೆಂಬಲ ನೀಡಲು ಚಾಮರಾಜನಗರದಿಂದ ದೆಹಲಿವರೆಗೆ ಸುಮಾರು 7ಸಾವಿರ ಕಿಲೋ ಮೀಟರ್ ಪಾದಯಾತ್ರೆ ಆರಂಭಿಸಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಸುಭಾಷಚಂದ್ರಗೌಡ ಪಾಟೀಲ, ಮಾಬುಸಾಬ ಯರಗುಪ್ಪಿ, ಸಿದ್ದಲಿಂಗಪ್ಪ ಹಳ್ಳದ, ಆಜಾದ ನಾಶಿಪುಡಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

31/07/2021 09:55 am

Cinque Terre

31.57 K

Cinque Terre

3

ಸಂಬಂಧಿತ ಸುದ್ದಿ