ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಾರಿಬಿದ್ದು ಕಾಲು ಮುರಿದುಕೊಂಡ ಅಫಜಲ್ ಪುರ ಶಾಸಕ ಪಾಟೀಲ

ಶಾಸಕರೊಬ್ಬರು ಸ್ನಾನ ಮಾಡಲು ಹೋದಾಗ ಜಾರಿ ಬಿದ್ದ ಪರಿಣಾಮ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.

ಅಫಜಲಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಂ ವೈ ಪಾಟೀಲ್ ಅವರು ನಿನ್ನೇ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಮುಗಿಸಿ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದರು.

ಇಂದು ಮುಂಜಾನೆ ಸ್ನಾನ ಮಾಡಲು ಹೋಗುವಾಗ ಕಾಲು ಜಾರಿ ಬಿದ್ದ ಪರಿಣಾಮ ಶಾಸಕರ ಕಾಲು ಮುರಿದಿದೆ.ಕೂಡಲೇ ಶಾಸಕರ ಆಪ್ತಸಹಾಯಕರು ಹಾಗೂ ಗನ್ ಮ್ಯಾನ್ ಚಿಕಿತ್ಸೆಗಾಗಿ ಗೋಕುಲ್ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/08/2022 10:22 am

Cinque Terre

131.9 K

Cinque Terre

12

ಸಂಬಂಧಿತ ಸುದ್ದಿ