ಬೆಳಗಾವಿ- ನಗರದಲ್ಲಿ ಇಂದು ಮೀಸಲಾತಿ ವಿಚಾರವಾಗಿ ಸಭೆ ನಡೆದಿತ್ತು. ಈ ವೇಳೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಸಚಿವ ಜಾರಕಿಹೊಳಿ ಅವರಿಗೆ ಹೋರಾಟದಲ್ಲಿ ಭಾಗವಹಿಸುವಂತೆ ಅಹ್ವಾನ ನೀಡಿದ್ದಾರೆ. ಹಾಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇದೊಂದು ಕೆಲಸ ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ವಿನಯ್ ಕುಕಕರ್ಣಿ ಅವರನ್ನು ಉದ್ದೇಶಿಸಿ ನೀನೇ ಬಿಜೆಪಿಗೆ ಬರ್ತಿಯಲ್ಲ? ಎಂದರು. ಆಗ ವಿನಯ್ ಕುಲಕರ್ಣಿ ನಗುತ್ತ ರಮೇಶ್ ಜಾರಕಿಹೊಳಿ ಅವರಿಗೆ ಕೈ ಮುಗಿದರು.
ಈ ಮಾತು ಕೇಳಿ ಬಂದ ಕೂಡಲೇ ಕೂಡಲ ಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲೇ ವಿಷಯಾಂತರ ಮಾಡಿದರು.
ನಂತರ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ವಿನಯ್ ಕುಲಕರ್ಣಿ, ನಾನು ಬಿಜೆಪಿ ಸೇರುವ ಬಗ್ಗೆ ಯಾರ ಬಳಿಯೂ ಚರ್ಚೆ ಮಾಡಿಲ್ಲ. ನನ್ನ ಹೊಲ ಮನೆ ನೋಡಿಕೊಂಡು, ನೇಗಿಲು ಹೊಡೆದುಕೊಂಡು ಆರಾಮಾಗಿದ್ದೇನೆ. ಈ ಬಗ್ಗೆ ನನ್ನ ಕಾರ್ಯಕರ್ತರ ಬಳಿಯೂ ಚರ್ಚೆ ಮಾಡಿಲ್ಲ. ಆದ್ರೆ ರಮೇಶ್ ಜಾರಕಿಹೊಳಿ ಅವರು ಬಾ ಎಂದು ಕರೆದರು ಅದಕ್ಕಷ್ಟೇ ನಾನು ಕೈ ಮುಗಿದೇ ಎಂದರು.
Kshetra Samachara
28/10/2020 06:10 pm