ಧಾರವಾಡ: ನಾಳೆ ನಡೆಯಲಿರುವ ಪಶ್ಚಿಮ ಪದವೀಧರರ ಚುನಾವಣೆ ಸಂಪೂರ್ಣ ಕೊರೊನಾ ನಿಯಮಾವಳಿಗಳ ಪ್ರಕಾರವೇ ನಡೆಯಲಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಚುನಾವಣಾಧಿಕಾರಿಗಳೂ ಆಗಿರುವ, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಪದವೀಧರರ ನಾಲ್ಕೂ ಜಿಲ್ಲೆ ಸೇರಿದಂತೆ ಒಟ್ಟು 74,268 ಜನ ಮತದಾರರಿದ್ದಾರೆ. ಅದರಲ್ಲಿ 47584 ಪುರುಷ ಮತದಾರರಿದ್ದರೆ, 26173 ಮಹಿಳಾ ಮತದಾರರಿದ್ದಾರೆ. ಇತರೆ 511 ಜನ ಮತದಾರರಿದ್ದಾರೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಚುನಾವಣಾ ಸಿದ್ಧತೆ ಮಾಡಿಕೊಳ್ಳಲಾಗಿದೆ. 582 ಜನ ಸಿಬ್ಬಂದಿ, 362 ಜನ ಮೈಕ್ರೋ ಅಬಸರ್ವರ ಇದ್ದಾರೆ. 41 ಜನ ಸೆಕ್ಟರ್ ಆಫೀಸ್ ಇದ್ದಾರೆ. ಕೊರೊನಾಕ್ಕೆ ಸಂಬಂಧಿಸಿದಂತೆ 42 ಜನ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದರು.
71 ಕಡೆಗಳಲ್ಲಿ ವೀಡಿಯೋಗ್ರಾಫಿ ವ್ಯವಸ್ಥೆ ಹಾಗೂ 80 ಜನ ಆಶಾ ವರ್ಕರ್ ಗಳನ್ನು ನೇಮಕ ಮಾಡಲಾಗಿದ್ದು, ಪ್ರತಿ ಕೇಂದ್ರದಲ್ಲಿ ಹೆಲ್ತ್ ಡೆಸ್ಕ್ ಮಾಡಿ 381 ಜನರನ್ನು ಕೆಲಸಕ್ಕೆ ನೇಮಿಸಲಾಗಿದೆ ಎಂದರು.
Kshetra Samachara
27/10/2020 05:34 pm