ಕುಂದಗೋಳ : ಮತಕ್ಷೇತ್ರದದಲ್ಲಿ ಎರೆಡು ಭಾರಿಶಾಸಕರಾಗಿ ಗುರುತಿಸಿಕೊಂಡಿದ್ದ ಎಮ್.ಎಸ್.ಅಕ್ಕಿ ಸದ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರಿಂದ ಸೋಷಿಯಲ್ ಮೀಡಿಯಾಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು ಗೋ ಬ್ಯಾಕ್ ಅಕ್ಕಿ ಎಂಬ ಅಭಿಯಾನ ಆರಂಭಿಸಿ ಟೀಕೆಗಳ ಸುರಿಮಳೆ ಗೈದಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಾಯಕರು ಹಾಗೂ ಶಾಸಕಿ ಕುಸುಮಾವತಿ ಶಿವಳ್ಳಿಯವರೇ ಎಮ್.ಎಸ್.ಅಕ್ಕಿಯಿಂದ ಹೂ ಗುಚ್ಚ ಪಡೆದು ಕಾಂಗ್ರೆಸ್ ಗೆ ಸ್ವಾಗತಸಿದ್ದರೆ ಇತ್ತ ಕಾರ್ಯಕರ್ತರು ಸಾಮಾಜಿಕ ಜಾಲತಾಣ ಫೇಸ್ಬುಕ್ ಒಳಗೆ ಶಿವಳ್ಳಿ ಪೋಟೋ ಹಾಕಿ ನೀವು ಕಟ್ಟಿರುವ ಕಾಂಗ್ರೆಸ್ ಕೋಟೆಗೆ ನೀವೆ ಸಾಟಿ ಮತ್ಯಾರು ಬೇಡ ಎಂಬ ಸಂದೇಶ ಸಾರಿದ್ದಾರೆ.
ಈ ಎಲ್ಲದರ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತ್ರ ಮತ್ತೆನು ಹೊಸ ರಣತಂತ್ರ ಹೆಣೆಯಲು ಈ ಪಕ್ಷದ ಕಾರ್ಯಕರ್ತರನ್ನ ಪರಿಗಣಿಸಿದೆ ಅಕ್ಕಿಯ ಕೈ ಹಿಡಿದಿದ್ದಾರೆ ಎಂಬ ಅಂಶ ತಿಳಿಯದಾಗಿದ್ದು ನಾಳೆ ಅಧಿಕೃತವಾಗಿ ಕೈ ಹಿಡಿಯಲಿರುವ ಎಮ್.ಎಸ್.ಅಕ್ಕಿ ಬಗ್ಗೆ ಕಾರ್ಯಕರ್ತರ ಅಸಮಾಧಾನ ಹೊಗೆ ಪಕ್ಷದ ವರಿಷ್ಠರ ಗಮನಕ್ಕೆ ಬರಲಿದೆಯಾ ? ಅಥವಾ ಅಕ್ಕಿ ಪಕ್ಷದಲ್ಲಿ ನಾಯಕರಾಗ್ತಾರಾ ? ಸಂಘಟಕರಾ ? ಕಾದು ನೋಡಬೇಕಿದೆ.
Kshetra Samachara
22/10/2020 10:05 am