ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವೆ: ಗುರಿಕಾರ

ಧಾರವಾಡ: ನೌಕರರ, ಶಿಕ್ಷಕರ ಅಭ್ಯುದಯಕ್ಕಾಗಿ ಸಂಘಟನೆ ರಚಿಸಿಕೊಂಡು ಆ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸಿದ ಅನುಭವ ತಮಗಿದ್ದು, ಇದೇ ಮಾದರಿಯಲ್ಲಿ ಪದವೀಧರರ ಸಮಸ್ಯೆಗಳಿಗೂ ಧ್ವನಿಯಾಗುತ್ತೇನೆ ಎಂದು ಪಶ್ಚಿಮ ಪದವೀಧರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಭರವಸೆ ನೀಡಿದರು.

ಬುಧವಾರ ಕ್ಷೇತ್ರದ ವಿವಿಧೆಡೆ ಪ್ರಚಾರ್ಯ ಕಾರ್ಯದಲ್ಲಿ ಗುರಿಕಾರ ಅವರನ್ನು ಭೇಟಿಯಾದ ಪದವೀಧರರು ತಮ್ಮ ಸಮಸ್ಯೆಗಳ ಪಟ್ಟಿ ನೀಡಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಿಕ್ಷಕರ ಸಂಘಟನೆಯಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಸಂಘಟನೆ, ಹೋರಾಟ ಮೂಲಕವೇ ಶಿಕ್ಷಕರ ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಪದವೀಧರರ ತೊಂದರೆಗಳಿಗೂ ಸ್ಪಂದನೆ ಮಾಡುವ ಬದ್ಧತೆ ತಮ್ಮಲ್ಲಿದೆ ಎಂದರು.

ಸರ್ಕಾರ ನೇಮಿಸಿಕೊಳ್ಳುವ ಎಲ್ಲ ತಾತ್ಕಾಲಿಕ ನೇಮಕಾತಿಯಲ್ಲಿ ನಿವೃತ್ತರೇ ಇದ್ದಾರೆ. ಈ ಸ್ಥಳಗಳಲ್ಲಿ ನಿರುದ್ಯೋಗಿ ಪದವೀಧರರನ್ನು ನೇಮಿಸುವುದು, ನಿರುದ್ಯೋಗಿ ಪದವೀಧರರಿಗೆ ಸುಸ್ಥಿರ ಕೃಷಿಗೆ ತೊಡಗಿಕೊಳ್ಳಲು ಸುಸ್ಥಿರ ನೆರವು ಯೋಜನೆ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕುವುದು, ಪದವೀಧರ ಸಹಕಾರಿ ಸಂಘಗಳ ಸ್ಥಾಪನೆ, ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಪದವೀಧರ ಸ್ವಹಾಯ, ಸ್ವಉದ್ಯೋಗ ಸಂಘಗಳ ಸ್ಥಾಪನೆ ಹೀಗೆ ಅನೇಕ ಯೋಜನೆಗಳನ್ನು ಇಟ್ಟುಕೊಂಡಿರುವುದಾಗಿ ಹೇಳಿದರು.

ಬುಧವಾರ ಹುಬ್ಬಳ್ಳಿಯ ನೆಹರು ಕಾಲೇಜು, ಕುಂದಗೋಳ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಗುರಿಕಾರ ಪ್ರಚಾರ ನಡೆಸಿದರು.

ಶಿಗ್ಗಾವಿಯ ಎಪಿಎಂಸಿ ಬಳಿ ಸಹ ಪದವೀಧರರ ಗುರಿಕಾರ ಅವರಿಗೆ ಸಮಸ್ಯೆಗಳ ಪಟ್ಟಿ ನೀಡಿದರು. ಈ ಸಂದರ್ಭದಲ್ಲಿ ಎನ್.ಎ.ನದಾಫ, ಶಂಕರ ಸಾವೂರ, ರಾಘು ನರಗುಂದ, ನಾಗರಾಜ ಉಣಕಲ್ ಮತ್ತಿತರರು ಇದ್ದರು.

ಅಲ್ಲದೇ, ಗುರಿಕಾರ ಅವರ ಪರವಾಗಿ ಧಾರವಾಡ, ಹಾವೇರಿ, ಶಿರಸಿ, ಕಾರವಾರ ಮತ್ತಿತರ ಕಡೆಗಳಲ್ಲಿ ವಿವಿಧ ತಂಡಗಳು ಪ್ರಚಾರ ಮಾಡಿದವು.

Edited By : Manjunath H D
Kshetra Samachara

Kshetra Samachara

21/10/2020 09:43 pm

Cinque Terre

47.67 K

Cinque Terre

4

ಸಂಬಂಧಿತ ಸುದ್ದಿ