ಧಾರವಾಡ: ಧಾರವಾಡ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ 1 ವರ್ಷ 2 ತಿಂಗಳು ಕೆಲಸ ಮಾಡಿದ್ದೇನೆ. ಈ ಅವಧಿಯಲ್ಲಿ ನನಗೆ ಸಹಕಾರ ನೀಡಿದ ಜಿಲ್ಲೆಯ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ನಿರ್ಗಮಿತ ಎಸ್ಪಿ ವರ್ತಿಕಾ ಕಟಿಯಾರ್ ಹೇಳಿದರು.
ಧಾರವಾಡದ ಡಿಎಆರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಧಾರವಾಡ ಜಿಲ್ಲೆಯಲ್ಲಿ ಇದು ನಾನು ಆಚರಣೆ ಮಾಡುತ್ತಿರುವ ಕೊನೆಯ ಪೊಲೀಸ್ ಹುತಾತ್ಮ ದಿನಾಚರಣೆಯಾಗಿದೆ. ಮುಂದೆ ಬರುವ ಎಸ್ಪಿ ಕೂಡ ಸಾಕಷ್ಟು ಅನುಭವ ಉಳ್ಳವರಾಗಿದ್ದಾರೆ. ಅವರಿಂದಲೂ ಉತ್ತಮ ಕಾರ್ಯಗಳಾಗಲಿವೆ ಎಂದರು.
ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಪೊಲೀಸರು ಹಾಗೂ ಜಿಲ್ಲೆಯ ಜನತೆ ನನಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಾನು ಕೆಲಸ ಮಾಡಿದ್ದು, ನನಗೆ ಖುಷಿ ಕೊಟ್ಟಿದೆ ಎಂದರು.
Kshetra Samachara
21/10/2020 10:28 am