ಹುಬ್ಬಳ್ಳಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಪರ್ವ ಆರಂಭವಾಗಿದೆ. ಒನ್ ರೇಶನ್, ಒನ್ ಕಾರ್ಡ್ , ಜನ್ ಧನ್ ಯೋಜನೆ ಮೂಲಕ ಜನಪರ ಕಾರ್ಯ ಜಾರಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅನೇಕ ಜನಪರ ಯೋಜನೆ ಜಾರಿ ತರುವ ಮೂಲಕ ವಿರೋಧಿಗಳಿಗೆ ಟೀಕೆ ಮಾಡಿಲು ಸಹ ಅವಕಾಶ ಇಲ್ಲದಂತಾಗಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.....
ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಇನ್ನು ವರೆಗೂ ಸರ್ಕಾರದ ಯಾವುದೇ ಯೋಜನೆ ಜಾರಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ನೀಡಿಲ್ಲ. ಸಾವಿರಾರು ನಿರುಪಯುಕ್ತ ಯೋಜನೆ ರದ್ದು ಮಾಡಲಾಗಿದೆ.ಅದೇ ರೀತಿಯಾಗಿ ಶಿಕ್ಷಣದಲ್ಲಿಯೂ ಸಹ ಸ್ವಾವಲಂಬಿ, ಬದುಕು ರೂಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ಎಪಿಎಂಸಿ, ಕೃಷಿ ಸುಧಾರಣಾ ನೀತಿ ಜಾರಿ, ಸ್ವಾಮಿತ್ವ ಯೋಜನೆ ಮೂಲಕ ಜನಸಾಮಾನ್ಯರ ಪರವಾಗಿ ಪೂರಕವಾದ ಯೋಜನೆ ಜಾರಿ ಮಾಡಲಾಗಿದೆ. ನೆರೆ ತಡೆಯಲು ಯಾರಿಂದಲೂ ಆಗುವುದಿಲ್ಲ, ಆದರೆ ನೆರೆ ಹಾವಳಿಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಖಂಡಿತ ಪರಿಹಾರ ನೀಡಲು ತಿಳಿಸುತ್ತೆನೆ ಎಂದರು. ಈಗಾಗಲೇ ರಾಜ್ಯದ ಎಲ್ಲ ಪ್ರದೇಶಕ್ಕೆ ಸ್ವತಃ ನಾನೆ ಹೋಗಿ ಪ್ರವಾಸ ಮಾಡುತ್ತಾ ಪಕ್ಷದ ಪರವಾಗಿ ದುಡಿಯುತ್ತೆನೆ ಎಂದರು...
Kshetra Samachara
20/10/2020 12:26 pm