ಧಾರವಾಡ: ಪಶ್ಚಿಮ ಪದವೀಧರರ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಗುರಿಕಾರ ಅವರ ಪರವಾಗಿ ಅವರ ಬೆಂಬಲಿಗರು ಇಂದು ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ವಿವಿಧ ಊರುಗಳಲ್ಲಿ ಪ್ರಚಾರ ನಡೆಸಿದರು.
ರಾಣೆಬೆನ್ನೂರು ತಾಲೂಕಿನ ಕಜ್ಜರಿ ಕಾಕೋಳ, ಹುಲಿಹಳ್ಳಿ, ಕೂನಬೇವುಗಳಲ್ಲಿ ಪದವೀಧರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗುಡ್ಡಪ್ಪ ಗುಂಡಪ್ಪನವರ, ಮಹಾದೇವಪ್ಪ ಹಲವಾಗ, ರಮೇಶ ಮಾಗೋಡ, ನಾಗರಾಜ ಗುಡ್ಡದ, ಶಿವರಾಜ ಕರಿಗಾರ, ಪ್ರದೀಪ ಕಾಯಕದ, ಪ್ರವೀಣ ಕುಪ್ಪೇಲೂರು ಮುಂತಾದವರು ಪಾಲ್ಗೊಂಡಿದ್ದರು.
ಆನಂದ ಹಾರಿಕೊಪ್ಪ ಅವರ ತಂಡವು ಧಾರವಾಡದ ಮನಗುಂಡಿ, ಮನಸೂರು, ಮುಗದ, ಕಲಕೇರಿ ಹಾಗೂ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿತು.
ಇನ್ನು ಗಣೇಶ ಜಿರಗೋಡ, ಸೋಮೇಶ ಹಂಚಿನಮನಿ, ಯಲ್ಲಪ್ಪ ಜಿರಗೋಡ, ಪ್ರಕಾಶ ಮುಗದ, ಆಕಾಶ ಜಿರಗೋಡ, ಮಂಜು ಹಂಚಿನಮನಿ, ಜಗದೀಶ ಜಿರಗೋಡ, ಕಲಮೇಶ ಮುಗದ ಅವರು ಕಲಘಟಗಿ ನಗರದಲ್ಲಿ ವಿವೇಕಾನಂದ ನಗರ, ವಿದ್ಯಾಗಿರಿ, ಟಿಎಂಸಿ ರಸ್ತೆ, ಬೇಂಡಿಗೇರಿ ಓಣಿ, ಮುಲ್ಲಾ ಓಣಿ, ಕೆಎಚ್ ಬಿ ಕಾಲೊನಿ, ಗ್ರಾಮ ದೇವಿ ಗುಡಿ ಓಣಿ, ಗಾಂಧಿ ನಗರ, ಶಿವಬಸವನಗರ, ಜೈನ ಗಲ್ಲಿ, ಕೇರಿ ಓಣಿಗಳಲ್ಲಿ ಪ್ರಚಾರ ನಡೆಸಿದರು.
ಎಸ್ ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಈರಣ್ಣ ಮುರಗೋಡ, ರಂಗ ಭೂಮಿ ಕಲಾವಿದ ಮಲ್ಲಪ್ಪ ಹೊಂಗಲ, ಲಕ್ಷ್ಮಣ ಮೊಕಾಶಿಯವರನ್ನೊಳಗೊಂಡ ತಂಡ ಹಳಿಯಾಳ, ಶಿರಸಿ, ಸಿದ್ದಾಪುರ, ಹೊನ್ನಾವರ, ಕಾರವಾರ ತಾಲೂಕಿನಾದ್ಯಂತ ಬಸವರಾಜ ಗುರಿಕಾರ ಅವರ ಪರವಾಗಿ ಪ್ರಚಾರ ಮಾಡಿದರು.
ಹೆಬಸೂರ, ಕಿರೇಸೂರ, ಕುಸುಗಲ್ ಗ್ರಾಮಗಳಲ್ಲಿ ಬಸವರಾಜ ಗುರಿಕಾರ ಅವರ ಅಭಿಮಾನಿಗಳು ಪ್ರಚಾರ ಕಾರ್ಯ ಮಾಡಿದರು.
ಕೃಷಿ ವಿಶ್ವವಿದ್ಯಾಲಯ, ಮಾನಸಿಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಇಲಾಖೆ, ಸರಕಾರಿ ಪದವಿ ಕಾಲೇಜುಗಳಲ್ಲಿ ಎಸ್.ಬಿ ಪೂಜಾರ, ಎಚ್.ಎಂ. ಹೊಸಕೇರಿ, ವಿಜಯ ಜಡವಾ, ಮಂಜುನಾಥ, ಲಾಲ ಸಾಬ್ ಇತರರು ಪ್ರಚಾರ ನಡೆಸಿದರು.
Kshetra Samachara
12/10/2020 08:48 pm