ಧಾರವಾಡ: ನಾ ಯಾವ ಬಿಜೆಪಿ ನಾಯಕರನ್ನೂ ಭೇಟಿ ಆಗಿಲ್ಲ.. ದೆಹಲಿಗೂ ಹೋಗಿಲ್ಲ.. ನಾನು ನನ್ನ ಕಾರ್ಯಕರ್ತರನ್ನು ಬಿಟ್ಟು ಹೋಗೋದಿಲ್ಲ.. ಅವರೇ ನನ್ನ ಜೀವ ಎನ್ನುವ ಮೂಲಕ ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕೆಲ ಖಾಸಗಿ ಸುದ್ದಿ ಮಾಧ್ಯಮಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿವೆ. ಒಬ್ಬ ರಾಜಕೀಯ ನಾಯಕನನ್ನು ಬೆಳೆಸುವುದು ಹಾಗೂ ತೇಜೋವಧೆ ಮಾಡುವುದು ಮಾಧ್ಯಮಗಳು. ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಒಬ್ಬರನ್ನು ತೇಜೋವಧೆ ಮಾಡಬಾರದು. ನಾನು ರಾಜಸ್ಥಾನಕ್ಕೆ ಕುದುರೆ ತರಲೆಂದು ಹೋಗಿದ್ದೆ. ಆ ಪ್ರಕಾರ ಕುದುರೆ ಖರೀದಿ ಮಾಡಿಕೊಂಡು ಬಂದಿದ್ದೇನೆ. ನನ್ನ ಕಾರ್ಯಕರ್ತರು ಧೃತಿಗೆಡುವುದು ಬೇಡ ಎಂದಿದ್ದಾರೆ.
Kshetra Samachara
08/10/2020 02:22 pm