ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಜಂಗಮ ದಂಪತಿಗಳ ಪಾದಪೂಜೆ

ಅಣ್ಣಿಗೇರಿ: ತಾಲೂಕಿನ ಶಲವಡಿ ಗ್ರಾಮದ ಶ್ರೀ ಜಗದ್ಗುರು ವಿಶ್ವರಾಧ್ಯರ ಮೂರ್ತಿಗೆ ರುದ್ರಾಭಿಷೇಕ ಮತ್ತು 21 ಜಂಗಮ ದಂಪತಿಗಳ ಪಾದಪೂಜೆಯ ಕಾರ್ಯಕ್ರಮವನ್ನು ಗ್ರಾಮದ ದೇಸಾಯಿ ಪೇಟೆಯ ಓಣಿಯ ಚರಂತಿ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇನ್ನೂ ಇದರ ಜೊತೆಗೆ ಶ್ರೀ ಗುರುಶಾಂತೇಶ್ವರ ಮಹಾಸ್ವಾಮಿಗಳಿಂದ ಯುವಕರಿಗೆ ಕಂಕಣಧಾರೆ ಕಾರ್ಯಕ್ರಮವನ್ನು ಸಹ ಆಯೋಜನೆ ಮಾಡಲಾಗಿತ್ತು. ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಗೀತ ಸೇವೆಯನ್ನು ಮುತ್ತಣ್ಣ ಹೆಬಸೂರ್ ಮತ್ತು ತಬಲಾ ಸೇವೆ ಅಕ್ಬರ್ಸಾಬ್ ನದಾಫ್ ಅವರು ನೀಡಿದರು. ಈ ವೇಳೆ ಗ್ರಾಮದ ಗುರು ಹಿರಿಯರು ಹಾಗೂ ಮಠದ ಭಕ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/09/2022 07:45 am

Cinque Terre

14.62 K

Cinque Terre

0

ಸಂಬಂಧಿತ ಸುದ್ದಿ