ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗೋಡೆಗಳಲ್ಲಿ ರಾರಾಜಿಸುತ್ತಿದೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ: ಸ್ವಚ್ಛತೆಗಾಗಿ ಯುವಪಡೆಯಿಂದ ವಿನೂತನ ಕಾರ್ಯ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ವಾಣಿಜ್ಯ ನಗರಿ, ಹುಬ್ಬಳ್ಳಿಯನ್ನು, ಯುವ ಪಡೆಯೊಂದು ನಮ್ಮ ನಗರ ಸ್ವಚ್ಛ ನಗರ ಎಂಬ ಕಾನ್ಸೆಪ್ಟ್ ನಡಿ ಸುಂದರ ನಗರ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಗೋಡೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು ರಾರಾಜಿಸುತ್ತಿವೆ.

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ, ಗೋಡೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮತ್ತು ವೀರಯೋಧರ ಚಿತ್ರವನ್ನು ಬಿಡಿಸುತ್ತಿರುವ ಇವರು ರೆವಲ್ಯೂಷನ್ ಮೈಂಡ್ ಯುವಕ ಯುವತಿಯರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ್ತು ಕೆಎಸ್ಆರ್‌ಟಿಸಿ ಸಂಯೋಗದೊಂದಿಗೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಗೋಡೆಯುದ್ದಕ್ಕೂ ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಮತ್ತು ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಭರತನಾಟ್ಯ, ನೇಗಿಲು ಹಿಡಿದ ರೈತ, ಹಾಗೇ ಡಾ.ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವಾರು ಚಿತ್ರಗಳನ್ನು ಬಿಡಿಸಿ ನಗರದ ಗೋಡೆಗಳನ್ನು ಸುಂದರಗೊಳಿಸಿದ್ದಾರೆ.

ಈ ಯುವಪಡೆ ಹುಬ್ಬಳ್ಳಿಯ ಹಲವಾರು ಕಡೆಗೆ ಗೋಡೆಗಳಲ್ಲಿ ಚಿತ್ರವನ್ನು ಬಿಡಿಸಿದ್ದಾರೆ. ಈಗಾಗಲೇ ಬಿಡಿಸಿರುವ ಚಿತ್ರವನ್ನು ನೋಡಿ ಜನರು ಸೆಲ್ಫಿ ಕೂಡ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಹಾಗೂ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ಚಿತ್ರಗಳಲ್ಲಿ ನಟಿಸಿದ ಬಾಲ ನಟಿ ಬೇಬಿ ಶಾರ್ವರಿ ಕೂಡ, ಈ ಪೇಂಟಿಂಗ್ ಬಿಡಿಸುವುದನ್ನು ನೋಡಿ ತಾನು ಕೂಡ ಪೇಂಟಿಂಗ್ ಮಾಡಿ, ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ್ದಾಳೆ.

ಒಟ್ಟಿನಲ್ಲಿ ಇಷ್ಟೆಲ್ಲಾ ಕಷ್ಟ ಪಟ್ಟು ಯುವ ಪಡೆ ಹುಬ್ಬಳ್ಳಿಯನ್ನು ಸುಂದರಗೊಳಿಸುತ್ತಿದ್ದು, ಜನ ಕೂಡಾ ಸ್ವಚ್ಛತೆಯನ್ನ ಕಾಪಾಡಿಕೊಂಡು ಹೋಗ್ಬೇಕಿದೆ.

Edited By : Manjunath H D
Kshetra Samachara

Kshetra Samachara

09/08/2022 11:45 am

Cinque Terre

26.32 K

Cinque Terre

3

ಸಂಬಂಧಿತ ಸುದ್ದಿ