ಅಣ್ಣಿಗೇರಿ: ಪಟ್ಟಣದ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಇಂದು ಪುರಸಭೆ ವ್ಯಾಪ್ತಿಗೆ ಒಳಪಡುವ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಇನ್ನೂ ಪಟ್ಟಣದ ಪುರಸಭೆಗೆ ನೀಡಲಾದ ಅಭಿವೃದ್ಧಿಗಳ ಕೆಲಸದ ಕಾಮಗಾರಿಗಳ ವರದಿಯನ್ನು ಪುರಸಭೆಯ ಮುಖ್ಯ ಅಧಿಕಾರಿಗಳಾದ ಮಾಂತೇಶ್ ನಿಡುವಣಿ ಅವರು ಸಭೆಯ ಅಧ್ಯಕ್ಷರು ಮತ್ತು ಸಭೆಯಲ್ಲಿ ಹಾಜರಾದವರು ಮುಂದೆ ಓದಿ ಹೇಳಿದರು.
ಪುರಸಭೆ ವ್ಯಾಪ್ತಿಗೆ ಬರುವ 23 ವಾರ್ಡುಗಳ ಸದಸ್ಯರುಗಳು ತಮ್ಮ ವಾರ್ಡಗಳಲ್ಲಿ ಇರುವ ಸಮಸ್ಯೆಗಳನ್ನು ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ಮುಂದೆ ಹೇಳಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದ ಸಚಿವರು ಮಾತನಾಡಿ ಪಟ್ಟಣದ ಕೆಲವೊಂದು ವಾರ್ಡಗಳಲ್ಲಿ ಅಂಗನವಾಡಿ ಕೇಂದ್ರಗಳ ಅವಶ್ಯಕತೆ ಇರುವ ಕಡೆ ಹಚ್ಚಿನ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಸಿಡಿಪಿಓ ಪಾಟೀಲ್ ಅವರಿಗೆ ಮತ್ತು ವಾರದಲ್ಲಿ ಎರಡು ದಿನ ಪಟ್ಟಣದಲ್ಲಿ ರೇಷನ್ ಕಾರ್ಡ್ ವಿತರಣೆ ಮಾಡಲು ದಂಡಾಧಿಕಾರಿ ಅನಿಲ್ ಬಡಿಗೇರ್ ಅವರಿಗೆ ನಿರ್ದೇಶನ ನೀಡಿದರು.
ಜಲಜೀವನ್ ಮಿಷನ್ ಯೋಜನೆಯಡಿ 24/7 ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳು, ದೇವಸ್ಥಾನ,ಮಸೀದಿಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು..
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವುದು ಅಣ್ಣಿಗೇರಿ ನವಲಗುಂದ ಮಾರ್ಗದ ರಸ್ತೆಗೆ 9 ಕೋಟಿ ಬಿಡುಗಡೆಯಾಗಿದೆ ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭವಾಗಲಿದೆ. ಹೀಗೆ ಪಟ್ಟಣದಿಂದ ಹಲವಾರು ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಲಿದೆ ಎಂದು ಸಚಿವರು ತಿಳಿಸಿದರು.
Kshetra Samachara
02/08/2022 11:46 am