ಅಣ್ಣಿಗೇರಿ: ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಪಟ್ಟಣದ ಐತಿಹಾಸಿಕ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ .
ಈ ಹಿನ್ನೆಲೆ ಶ್ರೀ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಪೂರ್ವಭಾವಿ ಯೋಗ ತರಬೇತಿ ಶಿಬಿರ ನಡೆಯುತ್ತಿದ್ದು,ಜೂನ್ 21ರಂದು ಬೆಳಿಗ್ಗೆ 6.45 ಉದ್ಘಾಟನಾ ಸಮಾರಂಭ 7 ರಿಂದ 8 ಗಂಟೆವರೆಗೆ ಯೋಗಾಭ್ಯಾಸ ನಡೆಯಲಿದೆ ಎಂದು ತಿಳಿದು ಬಂದಿರುತ್ತದೆ.
Kshetra Samachara
16/06/2022 10:21 pm